ಕರ್ನಾಟಕ

karnataka

ETV Bharat / city

ಭಾರತ-ದ.ಆಫ್ರಿಕಾ ಅಂತಿಮ ಟಿ20 ಪಂದ್ಯದ ಟಿಕೆಟ್ ಹಣ ಮರುಪಾವತಿಗೆ ದಿನಾಂಕ ನಿಗದಿ - ಟಿಕೆಟ್​ ಹಣ ಮರುಪಾವತಿ ಬಗ್ಗೆ ಕೆಎಸ್​ಸಿಎ ಪ್ರಕಟಣೆ

ಮಳೆಯಿಂದ ರದ್ದಾದ ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯದ ಅರ್ಧದಷ್ಟು ಹಣವನ್ನು ಹಿಂತಿರುಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ ದಿನಾಂಕ ಘೋಷಿಸಿದೆ.

ಪಂದ್ಯದ ಟಿಕೆಟ್ ಹಣ ಮರುಪಾವತಿಗೆ ದಿನಾಂಕ ನಿಗದಿ
ಪಂದ್ಯದ ಟಿಕೆಟ್ ಹಣ ಮರುಪಾವತಿಗೆ ದಿನಾಂಕ ನಿಗದಿ

By

Published : Jun 27, 2022, 3:39 PM IST

ಬೆಂಗಳೂರು:ಮಳೆಯಿಂದ ನಿಂತು ಹೋದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯದ ಟಿಕೆಟ್​ನ ಅರ್ಧದಷ್ಟು ಹಣವನ್ನು ಹಿಂತಿರುಗಿಸಲಾಗುವುದು ಎಂದು ಘೋಷಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ(ಕೆಎಸ್‌ಸಿಎ), ಇದೀಗ ಜುಲೈ 1 ರಿಂದ 3 ರವರೆಗೆ ಹಣ ವಾಪಸ್​ ನೀಡಲಾಗುವುದು ಎಂದು ತಿಳಿಸಿದೆ.

ಮಳೆಯಿಂದ ಪಂದ್ಯ ರದ್ದಾಗಿ ನಿರಾಶರಾದ ಅಭಿಮಾನಿಗಳಿಗೆ ಟಿಕೆಟ್​ನ ಶೇ.50 ರಷ್ಟು ಹಣ ವಾಪಸ್​ ನೀಡಲು ಸೂಚಿಸಿದ ದಿನಾಂಕಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೂ ರೀಫಂಡ್ ಪ್ರಕ್ರಿಯೆ ನಡೆಯಲಿದೆ. ಆಯಾ ಕೌಂಟರ್​ನಲ್ಲಿ ಹಣ ಹಿಂಪಡೆಯಬಹುದು ಎಂದು ಕೆಎಸ್​ಸಿಎ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ನಿಮಗೆ ತಿಳಿದಿರಲಿ:

  • ಟಿಕೆಟ್ ಪರಿಶೀಲಿಸಿದ ಬಳಿಕ ಹಣ ಸಂದಾಯ
  • ತಿದ್ದಲಾದ, ವಿರೂಪಗಳಿಸಲಾದ ಟಿಕೆಟ್ ಅಮಾನ್ಯ
  • ಒಬ್ಬ ವ್ಯಕ್ತಿ ಗರಿಷ್ಠ 5ಕ್ಕಿಂತ ಅಧಿಕ ಟಿಕೆಟ್ ತರುವಂತಿಲ್ಲ
  • ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಹಣ ಹಿಂತಿರುಗಿಸಲಾಗುವುದಿಲ್ಲ
  • ಟಿಕೆಟ್ ಹಣ ಹಿಂತಿರುಗಿಸುವ ಪ್ರಕ್ರಿಯೆಯಲ್ಲಿ ಕೆಎಸ್​ಸಿಎ ನಿರ್ಧಾರವೇ ಅಂತಿಮ
  • ಹೆಚ್ಚಿನ ವಿವರಗಳಿಗಾಗಿ ಕೆಎಸ್​ಸಿಎ ವೆಬ್‌ಸೈಟ್ ಪರಿಶೀಲಿಸಬಹುದು

ಇದನ್ನೂ ಓದಿ:ಬೆಂಗಳೂರು ಟಿ20 ಪಂದ್ಯದ ಶೇ.50ರಷ್ಟು ಟಿಕೆಟ್ ಹಣ ಮರಳಿಸಲಿದೆ ಕೆಎಸ್​ಸಿಎ

ABOUT THE AUTHOR

...view details