ಬೆಂಗಳೂರು: ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮವು ಅಂಚೆ ಮೂಲಕ ಮಾವು ಮಾರಾಟ ಪ್ರಕ್ರಿಯೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದು, ಇದೀಗ ಕೊರೊನಾ ಎರಡನೆ ಅಲೆ ವೇಳೆಯೂ ಸಹ ಅಂಚೆ ಮೂಲಕ ಮಾವು ಮಾರಾಟ ಪ್ರಕ್ರಿಯೆಯನ್ನು ನಿನ್ನೆಯಿಂದ ಪ್ರಾರಂಭಿಸಿದೆ.
ಬೆಳಿಗ್ಗೆ ನಗರದ ರಾಜನಭವನ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ರೈತರು ಬೆಳೆದ ಮಾವುಗಳು ಶೇಖರಿಸಲಾಗಿತ್ತು, ಅಲ್ಲದೆ ಆನ್ಲೈನ್ನಲ್ಲಿ ಮಾವು ಬುಕಿಂಗ್ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಬರಿಲಿದೆ ಈ ಮಾವಿನ ಹಣ್ಣುಗಳು.
ಇದನ್ನೂ ಓದಿ: ಉಡುಪಿ ಜಿಲ್ಲಾಡಳಿತ ಜತೆ ಸಚಿವ ಬೊಮ್ಮಾಯಿ ಸಭೆ; ಕೋವಿಡ್ ನಿಯಂತ್ರಣಕ್ಕೆ ಸಜ್ಜಾಗುವಂತೆ ಆದೇಶ
ಕಳೆದ ವರ್ಷವೂ ಸಹ ಮಾವು ಮಾರಾಟ ನಿಗಮ ಅಂಚೆ ಮೂಲಕ ಮಾವು ಮಾರಾಟ ಪ್ರಕ್ರಿಯೆ ಆರಂಭಿಸಿದ್ದು, ಮಾವು ಪ್ರಿಯರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಈ ಹಿನ್ನೆಲೆ ಪ್ರಸ್ತುತ ವರ್ಷವೂ ಸಹ ಈ ಕಾರ್ಯ ಸಾಗಲಿದ್ದು, ಮಾವು ಪ್ರಿಯರು ಆನ್ಲೈನ್ ಮೂಲಕ ಮಾವಿನ ಹಣ್ಣುಗಳನ್ನ ಬುಕ್ ಮಾಡಿ, ಹಣ ಪಾವಿತಿಸಿ ಅಂಚೆ ಮೂಲಕ ಪಡೆಯಬಹುದಾಗಿದೆ.
ಈ ಮಾವಿನ ಹಣ್ಣುಗಳು ರೈತರ ತೋಟದಿಂದ ಪ್ಯಾಕ್ ಆಗಿ ಅಂಚೆ ಇಲಾಖೆಗೆ ಬರುತ್ತದೆ. ಅಂಚೆ ಸಿಬ್ಬಂದಿ ಅದನ್ನು ಆಯಾ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತದೆ.