ಬೆಂಗಳೂರು: ಸಾಂಕ್ರಾಮಿಕ ಕೊರೊನಾ ವೈರಸ್ನಿಂದ ಜನರು ಹೈರಾಣಾಗಿದ್ದು, ಅದ್ಯಾವಾಗ ಕೊರೊನಾದಿಂದ ಮುಕ್ತಿ ಸಿಗುತ್ತಪ್ಪಾ ಅಂತ ಯೋಚಿಸುವಂತಾಗಿದೆ. ಈ ನಡುವೆ ಕೊಂಚ ಸಮಾಧಾನಕರ ಸಂಗತಿ ಎಂಬಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ - ಕೊರೊನಾ 2ನೇ ಅಲೆ
ಕಳೆದ ಎರಡು ದಿನಗಳಿಂದ ಬೆಂಗಳೂರು, ಮಂಡ್ಯ, ದಕ್ಷಿಣ ಕನ್ನಡ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಡಿಶ್ಚಾರ್ಜ್ ಸಂಖ್ಯೆ ಹೆಚ್ಚಳ
ಹಲವು ಜಿಲ್ಲೆಗಳಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆಯಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರು, ಮಂಡ್ಯ, ದಕ್ಷಿಣ ಕನ್ನಡ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಳವಾಗಿದೆ. ಅದರ ಅಂಕಿ-ಅಂಶ ಕೆಳಕಂಡಂತಿದೆ.
ಜಿಲ್ಲೆ | ಹೊಸ ಸೋಂಕು | ಡಿಸ್ಚಾರ್ಜ್ ಸಂಖ್ಯೆ |
ಬೆಂಗಳೂರು | 15,191 | 16,084 |
ಮಂಡ್ಯ | 1,153 | 1,400 |
ದಕ್ಷಿಣ ಕನ್ನಡ | 812 | 911 |
ಹಾಸನ | 792 | 1,258 |
ಧಾರವಾಡ | 737 | 857 |
ದಾವಣಗೆರೆ | 494 | 753 |
ಚಿಕ್ಕಮಗಳೂರು | 455 | 730 |
ಕೊಪ್ಪಳ | 437 | 562 |
ಚಿಕ್ಕಬಳ್ಳಾಪುರ | 354 | 495 |
ವಿಜಯಪುರ | 331 | 591 |
ಬೀದರ್ | 257 | 497 |
ರಾಯಚೂರು | 170 | 464 |
ಹಾವೇರಿ | 140 | 218 |
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್ಗಳು ಫುಲ್: ಸಾಮಾನ್ಯ ಬೆಡ್ ಮಾತ್ರ ಖಾಲಿ