ಕರ್ನಾಟಕ

karnataka

ETV Bharat / city

ಬಜೆಟ್​ನಲ್ಲಿ ರಾಜಸ್ವ, ವಿತ್ತೀಯ ಕೊರತೆ ಎಷ್ಟು? - ವಿತ್ತೀಯ ಮತ್ತು ರಾಜಸ್ವ ಕೊರತೆಯ ಆಯ-ವ್ಯಯ

ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅನಿಯಮ -2002ಕ್ಕೆ ತಿದ್ದುಪಡಿ ತಂದು ಸಾಮಾನ್ಯವಾಗಿ ಸಾಲದ ಗಾತ್ರ ಜಿಡಿಪಿಯ ಶೇ.25ರ ಒಳಗೆ ಮಿತಿಯನ್ನು ಕರೋನಾ ಕಾರಣದಿಂದ ಏರಿಕೆ ಮಾಡಲಾಗಿದೆ. ಈ ಮೂಲಕ ಮುಂದಿನ ಆರ್ಥಿಕ ವರ್ಷಕ್ಕೆ 5,18,366 ಕೋಟಿ ರೂ. ಗಳ ಸಾಲದ ಗಾತ್ರ ಹೆಚ್ಚಾಗಲಿದ್ದು, ಇದು ಜಿಡಿಪಿಯ ಶೇ.27.49 ರಷ್ಟಾಗಲಿದೆ...

Back to the deficit budget
ಈ ಬಾರಿಯ ಬಜೆಟ್​ನಲ್ಲಿ ರಾಜಸ್ವ, ವಿತ್ತೀಯ ಕೊರತೆ ಎಷ್ಟು?

By

Published : Mar 4, 2022, 7:20 PM IST

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದ ಜನತೆಗೆ ಹೊಸ ತೆರಿಗೆಯನ್ನು ವಿಧಿಸದೆ ಸರ್ವರನ್ನು ಸಂತೃಪ್ತಿಗೊಳಿಸುವ ಹೊಸ ಚೈತನ್ಯ, ಹೊಸ ಮುನ್ನೋಟದೊಂದಿಗೆ ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುವ ಗುರಿಯೊಂದಿಗೆ ಪ್ರಸಕ್ತ ಸಾಲಿನ ಬಜೆಟ್ ಇಂದು ಮಂಡನೆಯಾಗಿದೆ.

ರಾಜ್ಯದ ಅಭಿವೃದ್ಧಿಗೆ ಈ ಬಜೆಟ್​ನಲ್ಲಿ ಪಂಚಸೂತ್ರ ರೂಪಿಸಿದ್ದು, ಶಿಕ್ಷಣ, ಉದ್ಯೋಗ, ಸಬಲೀಕರಣ, ಆರೋಗ್ಯ ಸೂತ್ರ ಅಳವಡಿಸಿಕೊಳ್ಳಲಾಗಿದೆ.

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಇಂದು 2022-23ನೇ ಸಾಲಿನ 2.65 ಲಕ್ಷ ಕೋಟಿ ರೂ. (ಕಳೆದ ಬಾರಿಗಿಂತ ಶೇ.7.7ರಷ್ಟು ಗಾತ್ರ ಹೆಚ್ಚಳ) ಮೊತ್ತದ ಬಜೆಟ್ ಅನ್ನು ಮಂಡಿಸಿದ್ದಾರೆ.

ಕೃಷಿಕರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತರು, ಕಾರ್ಮಿಕರು, ನೇಕಾರರು, ದುರ್ಬಲ/ಹಿಂದುಳಿದ ವರ್ಗದವರು, ಕೃಷಿ, ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲ ವರ್ಗದವರನ್ನು ಸಂತೃಪ್ತಿಗೊಳಿಸುವ ಪ್ರಯತ್ನ ನಡೆಸಿರುವುದು ಕಂಡುಬಂದಿದೆ. ಸರ್ಕಾರದ ಖಜಾನೆ ತುಂಬಿಸುವ ವಾಣಿಜ್ಯ ತೆರಿಗೆ ಇಲಾಖೆಗೆ 77.10 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15 ಸಾವಿರ ಕೋಟಿ, ಅಬಕಾರಿ ಇಲಾಖೆ 29 ಸಾವಿರ ಕೋಟಿ ಹಾಗೂ ಸಾರಿಗೆ ಇಲಾಖೆಗೆ 8,007 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ನೀಡಿದ್ದಾರೆ.

ಎಲ್ಲ ಸಮುದಾಯವನ್ನು ಓಲೈಸಿದ ಬಜೆಟ್​: ವೀರಶೈವ, ಒಕ್ಕಲಿಗ, ಕ್ರಿಶ್ಚಿಯನ್, ಮರಾಠ, ಹಿಂದುಳಿದ ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೂ ಕೊಡುಗೆ ನೀಡುವ ಮೂಲಕ ಎಲ್ಲ ಸಮುದಾಯವನ್ನು ಓಲೈಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆ, ಸದ್ಯದಲ್ಲೇ ನಡೆಯಲಿರುವ ಜಿಲ್ಲಾ, ತಾಲೂಕು ಪಂಚಾಯತಿ ಹಾಗೂ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳಿಗೂ ಭರಪೂರ ಅನುದಾನ ನೀಡಲಾಗಿದೆ.

ರಾಜಸ್ವ, ವಿತ್ತೀಯ ಕೊರತೆ: ಈ ಬಾರಿ 14,699 ಕೋಟಿ ರೂ. ರಾಜಸ್ವ ಕೊರತೆ ಮತ್ತು 61,564 ಕೋಟಿ ವಿತ್ತೀಯ ಕೊರತೆಯನ್ನು ಅಂದಾಜಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ. 3.6ರಷ್ಟಿದೆ. ಮುಂದಿನ ಆರ್ಥಿಕ ವರ್ಷಕ್ಕೆ 5,18,366 ಕೋಟಿ ರೂ. ಗಳ ಸಾಲದ ಗಾತ್ರ ಹೆಚ್ಚಾಗಲಿದ್ದು, ಇದು ಜಿಡಿಪಿಯ ಶೇ.27.49ರಷ್ಟು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಸಾಲದ ಗಾತ್ರ ಜಿಡಿಪಿಯ ಶೇ.25ರ ಒಳಗೆ ಮಿತಿಯಲ್ಲಿರಬೇಕು ಎಂಬ ನಿಯಮವಿದೆ. ಕೊರೊನಾದಿಂದಾಗಿ ಇದನ್ನು ಸಡಿಲಿಸಲಾಗಿದ್ದು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅನಿಯಮ -2002ಕ್ಕೆ ತಿದ್ದುಪಡಿ ತರಲಾಗಿದೆ.

ತಮ್ಮ ಬಜೆಟ್ ಭಾಷಣವನ್ನು ಮುಂದುವರೆಸಿದ ಮುಖ್ಯಮಂತ್ರಿಯವರು, 2022-23ರಲ್ಲಿ ಕೇಂದ್ರ ಸರ್ಕಾರದಿಂದ ಜಿಎಸ್‍ಟಿ ನಷ್ಟ ಪರಿಹಾರ ಸೇರಿದಂತೆ ಒಟ್ಟು ರಾಜಸ್ವಸಂಗ್ರಹವನ್ನು 1,31,833 ಕೋಟಿ ರೂ.ಗಳೆಂದು ಅಂದಾಜು ಮಾಡಿದ್ದಾರೆ.

ತೆರಿಗೆಯೇತರ ರಾಜಸ್ವದಿಂದ 10,941 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನಿಂದ 29,783 ಕೋಟಿ ಸಹಾಯ ಧನದ ರೂಪದಲ್ಲಿ 17,281 ಕೋಟಿ ರೂ. ನೆರವನ್ನು ಅಂದಾಜಿಸಲಾಗಿದೆ. ಇವುಗಳಿಗೆ ಪೂರಕವಾಗಿ ಆರ್ಥಿಕ ಹೊಂದಾಣಿಕೆಯ ಕಾರಣಕ್ಕಾಗಿ ರಾಜ್ಯ ಸರ್ಕಾರ 72ಸಾವಿರ ಕೋಟಿ ರೂ.ಗಳ ಸಾಲ ಪಡೆಯಲಿದೆ. 18 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 71 ಕೋಟಿ ರೂ.ಗಳ ಸಾಲ ವಸೂಲಿ ಮೊತ್ತವನ್ನು ನಿರೀಕ್ಷಿಸಲಾಗಿದೆ.

ಕಳೆದ ಸಾಲಿನಲ್ಲಿ 2,43,734 ಕೋಟಿ ರೂ. ಗಾತ್ರದ ಬಜೆಟ್‍ಗೆ ಹೋಲಿಸಿದರೆ ಜಮೆಯ ಗಾತ್ರ 2.57 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಬಜೆಟ್‍ನ ಪರಿಷ್ಕೃತ ಅಂದಾಜು ವೆಚ್ಚ 2,53,165 ಕೋಟಿ ರೂ.ಗಳಾಗಿದ್ದು, ಇದು ಶೇ.7.7ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ:ಕಾಶಿಯಾತ್ರೆಗೆ 5 ಸಾವಿರ ರೂ ಸಹಾಯಧನ; ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿಗೆ ವಿಶೇಷ ಪ್ಯಾಕೇಜ್‌ ಟ್ರಿಪ್

ABOUT THE AUTHOR

...view details