ಕರ್ನಾಟಕ

karnataka

ETV Bharat / city

ಸಾವಿನ ಮನೆಯಲ್ಲಿ ಲಾಭಕೋರತನಕ್ಕೆ ಸರ್ಕಾರ ಇಳಿದಿದೆ : ಸಂಸದ ಡಿ. ಕೆ. ಸುರೇಶ್

ಕೋವಿಡ್ ಇಲ್ಲವಾದರೂ ನ್ಯುಮೋನಿಯಾ ಸೊಂಕಿತರಿಗೆ ತಕ್ಕ ಚಿಕಿತ್ಸೆ ದೊರೆಯುತ್ತಿಲ್ಲ. ರೆಮ್​​ಡಸಿವಿರ್ ಲಸಿಕೆಯೂ ಸಿಗದೇ ರಾಜ್ಯದ ಜನರನ್ನ ಇಕ್ಕಟ್ಟಿಗೆ ಸಿಲುಕಿಸಿ ಬಿಜೆಪಿ ಇಚ್ಚಾನುಸಾರ ಲಾಭದ ದಂಧೆಗೆ ಇಳಿದಿದೆ..

By

Published : May 10, 2021, 3:44 PM IST

in-name-of-corona-state-bjp-government-doing-business
ಸಂಸದ ಡಿಕೆ ಸುರೇಶ್

ಆನೇಕಲ್ :ಸರ್ಕಾರ ಖುದ್ದು ಕೊರೊನಾ ಪರೀಕ್ಷೆ, ಲಸಿಕೆಗಳನ್ನ ಸ್ವತಃ ಪೂರೈಸದೆ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬೇಕಿರುವ ಆಮ್ಲಜನಕ ಪೂರೈಕೆಯುಕ್ತ ಹಾಸಿಗೆಗಳನ್ನ ನೀಡದೇ ಸಾವಿನ‌ ಮನೆಯಲ್ಲಿ ಲಾಭಕೋರತನಕ್ಕೆ ಲಜ್ಜೆಯಿಲ್ಲದೆ ಕೈ ಹಾಕಿದೆ ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ದ ಹರಿಹಾಯ್ದಿದ್ದಾರೆ.

ಸಾವಿನ ಮನೆಯಲ್ಲಿ ಲಾಭಕೋರತನಕ್ಕೆ ಸರ್ಕಾರ ಇಳಿದಿದೆ ಎಂದ ಸಂಸದ ಡಿ.ಕೆ ಸುರೇಶ್​​

ಹುಲಿಮಂಗಲ ಗ್ರಾಮದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ರಾಜಗೋಪಾಲರೆಡ್ಡಿ ನೇತೃತದ ಮೂರು ಆ್ಯಂಬುಲೆನ್ಸ್ ಲೋಕಾರ್ಪಣೆಗೈದು ಮಾತನಾಡಿದ ಅವರು, ಸಾಮಾನ್ಯ ಹಾಸಿಗೆಗಗಳು ಮಾತ್ರ ಆಸ್ಪತ್ರೆಯಲ್ಲಿ ಖಾಲಿ ಇವೆ.

ಆದರೆ, ಆಮ್ಲಜನಕ ಯುಕ್ತ ವೆಂಟಿಲೇಷನ್ ಹಾಸಿಗೆ ನೀಡದೆ ಆನೇಕಲ್ ಸೋಂಕಿತರನ್ನ ಬೆಂಗಳೂರು ಭಾಗದ ಆಸ್ಪತ್ರೆಗಳಿಗೆ ಬುಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೋವಿಡ್ ಇಲ್ಲವಾದರೂ ನ್ಯುಮೋನಿಯಾ ಸೊಂಕಿತರಿಗೆ ತಕ್ಕ ಚಿಕಿತ್ಸೆ ದೊರೆಯುತ್ತಿಲ್ಲ. ರೆಮ್​​ಡಸಿವಿರ್ ಲಸಿಕೆಯೂ ಸಿಗದೇ ರಾಜ್ಯದ ಜನರನ್ನ ಇಕ್ಕಟ್ಟಿಗೆ ಸಿಲುಕಿಸಿ ಬಿಜೆಪಿ ಇಚ್ಚಾನುಸಾರ ಲಾಭದ ದಂಧೆಗೆ ಇಳಿದಿದೆ.

ಈವರೆಗೆ ಉಸ್ತುವಾರಿ ಸಚಿವರು ಒಂದು ಸಭೆಯನ್ನು ಕರೆಯದೆ ಕನಿಷ್ಟ ಸಲಹೆಯನ್ನೂ ಕೇಳದೆ ನೇರವಾಗಿ ಬಡವರನ್ನ ಕೊಲ್ಲುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ABOUT THE AUTHOR

...view details