ಕರ್ನಾಟಕ

karnataka

ETV Bharat / city

ಕೊರೊನಾ ಎಫೆಕ್ಟ್: ಸಿಎಂ ಮನೆ ಎದುರು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಎದುರು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಮಾರ್ಗಸೂಚಿ ಜಾರಿಗೊಳಿಸಿದ‌ ಬೆನ್ನಲ್ಲೇ ಸಿಎಂ ನಿವಾಸದ ಎದುರು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಕೊರೊನಾ ತಪಾಸಣೆ ನಂತರವೇ ನಿವಾಸ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Implementation of a c in front of the CM home
ಸಿಎಂ ಮನೆ ಎದುರು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿ

By

Published : Mar 15, 2020, 9:49 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಮಾರ್ಗಸೂಚಿ ಜಾರಿಗೊಳಿಸಿದ‌ ಬೆನ್ನಲ್ಲೇ ಸಿಎಂ ನಿವಾಸದ ಎದುರು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಕೊರೊನಾ ತಪಾಸಣೆ ನಂತರವೇ ನಿವಾಸ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬೆಳಗ್ಗೆ ಸಿಎಂ ಭೇಟಿಗೆ‌ ಬರುವವರಿಗೆ ಈ ಮಾರ್ಗಸೂಚಿ ಅನುಷ್ಠಾನಕ್ಕೆ ತರಲಾಗಿದ್ದು, ಸಿಎಂ ಬೆಳಗಾವಿ ಪ್ರವಾಸ ಮುಗಿಸಿ ಮಧ್ಯಾಹ್ನ ನಿವಾಸಕ್ಕೆ ಹಿಂದಿರುಗುವಷ್ಟರಲ್ಲಿ ಕೊರೊನಾ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗಿದೆ.

ಧವಳಗಿರಿ ನಿವಾಸದ ಗೇಟಿನ ಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ಉಪಕರಣ ಹಿಡಿದು ಆರೋಗ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಸಿಎಂ ಭೇಟಿಗೆ‌ ಬರುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಿದ್ದಾರೆ. ಸಿಎಂ ಭೇಟಿಗೆ ಬಂದ ಎಲ್ಲರನ್ನು ಚೆಕ್ ಮಾಡಿ, ನಂತರ ಸ್ಯಾನಿಟೇಜರ್​ನಿಂದ ಹ್ಯಾಂಡ್​ವಾಶ್ ಮಾಡಿಕೊಂಡು ಸಿಎಂ ನಿವಾಸಕ್ಕೆ‌ ಪ್ರವೇಶ ಮಾಡಬೇಕು.

ABOUT THE AUTHOR

...view details