ಕರ್ನಾಟಕ

karnataka

ETV Bharat / city

ವಾಹನ ಸಂಚಾರ ದಟ್ಟಣೆ ತಗ್ಗಿಸಲು ಆರೇಳು ತಿಂಗಳಲ್ಲಿ 12 ಹೈಸ್ಪೀಡ್ ಕಾರಿಡಾರ್​​​​ಗಳ ಅನುಷ್ಠಾನ: ಬೊಮ್ಮಾಯಿ - 12 ಹೈಸ್ಪೀಡ್ ಕಾರಿಡಾರ್ಗಳ ಅನುಷ್ಠಾನ

ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಇದನ್ನು ನಿಯಂತ್ರಿಸಿ ಹೊಸ ಆಯಮಾ ನೀಡಲು ಈಗಾಗಲೇ 12 ಕಡೆಗಳಲ್ಲಿ ಫ್ರಿ ಸಿಗ್ನಲ್ ಕಾರಿಡಾರ್ ಯೋಜನೆ ಅನುಷ್ಠಾನದಲ್ಲಿದ್ದು, ಮುಂದಿನ ಆರೇಳು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Home Minister Basavaraja Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ

By

Published : May 26, 2021, 2:37 PM IST

ಬೆಂಗಳೂರು:ನಗರದಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿಸಿ ಸುಗಮ ಸಂಚಾರಕ್ಕಾಗಿ 12 ಕಡೆಗಳಲ್ಲಿ ಹೈಸ್ಪೀಡ್ ಕಾರಿಡಾರ್​ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಆರೇಳು ತಿಂಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರ ಸಂಚಾರ ಪೊಲೀಸ್ ಇಲಾಖೆ ಖಾಸಗಿ ಕಂಪನಿಗಳ ಸಹಯೋಗದಲ್ಲಿ ನಗರದ ಟೌನ್​ಹಾಲ್​ನಲ್ಲಿ ಸಂಚಾರ ಪೊಲೀಸರಿಗೆ ರೇನ್​​​​ಕೋರ್ಟ್, ಫೇಸ್ ಮಾಸ್ಕ್ ವಿತರಣೆ ಹಾಗೂ ವೇರಿಬಲ್‌ ಮೇಸೆಜಿಂಗ್ ಸಿಸ್ಟಂ ಲೋಕಾರ್ಪಣೆಗೊಳಿಸಿ ಮಾತನಾಡಿದರು‌. ನಗರದಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಇದನ್ನು ನಿಯಂತ್ರಿಸಿ ಹೊಸ ಆಯಮಾ ನೀಡಲು ಈಗಾಗಲೇ 12 ಕಡೆಗಳಲ್ಲಿ ಫ್ರಿ ಸಿಗ್ನಲ್ ಕಾರಿಡಾರ್ ಯೋಜನೆ ಅನುಷ್ಠಾನದಲ್ಲಿದ್ದು, ಮುಂದಿನ ಆರೇಳು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ನಗರ ಬೆಳೆದಂತೆ ಬಿಬಿಎಂಪಿ ವ್ಯಾಪ್ತಿಯು ವಿಸ್ತಾರವಾಗುತ್ತಿದೆ. ಪೊಲೀಸ್ ಠಾಣೆಗಳ‌ ಪುನಾರಚನೆಗೆ ಸಂಬಂಧ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸೇರ್ಪಡೆಯಾಗಿರುವ ಏರಿಯಾಗಳನ್ನು ಗುರುತಿಸಿ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಸೇರಿಸಿ ಪುನಾರಚಿಸಲಾಗುವುದು ಎಂದರು.

ಬಿಆರ್​ಎಂಸಿಎಲ್ ವತಿಯಿಂದ 88 ಲಕ್ಷ ಬೆಲೆಯ 10 ಸಂದೇಹ ವಾಹಕಗಳು, ಎಂಬೆಸ್ಸಿ ಗ್ರೂಪ್ 4500 ಮುಖಗವಸು ಹಾಗೂ 8 ಸಾವಿರ ಕೈಗವಸುಗಳು ಹಾಗೂ ಆ್ಯಕ್ಟ್ ಕಂಪನಿಯಿಂದ 4,750 ರೈನ್ ಕೋರ್ಟ್ ವಿತರಿಸಲಾಯಿತು.







ABOUT THE AUTHOR

...view details