ಕರ್ನಾಟಕ

karnataka

ETV Bharat / city

14 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಲೋಪತಿ ವೈದ್ಯರು!

ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿ ಅಧಿಸೂಚನೆ ಹಿಂಪಡೆಯುವಂತೆ ಆಗ್ರಹಿಸಿ ಅಲೋಪತಿ ವೈದ್ಯರು, ಇಂದಿನಿಂದ ಫೆಬ್ರವರಿ 14ರವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

IMA outrage Against Notification that Ayurvedic Education Amendment
ಇಂದಿನಿಂದ 14 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಲೋಪತಿ ವೈದ್ಯರು

By

Published : Feb 1, 2021, 3:53 PM IST

ಬೆಂಗಳೂರು: ಮಿಕ್ಸೋಪತಿ ವಿರುದ್ಧ ತಿರುಗಿ ಬಿದ್ದಿರುವ ಅಲೋಪತಿ ವೈದ್ಯರು, ಇಂದಿನಿಂದ 14 ದಿನಗಳ ಕಾಲ ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಇಂದಿನಿಂದ 14 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಲೋಪತಿ ವೈದ್ಯರು

ಐಎಂಎ ಕಚೇರಿ ಆವರಣದಲ್ಲಿ ಇಂದು ಮುಂಜಾನೆಯಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಲೋಪತಿ ವೈದ್ಯರು, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯಾ ಮೆಡಿಸಿನ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಂಎಸ್ ಶಲ್ಯ ಮತ್ತು ಶಲಾಕ್ಯ ತಂತ್ರ ಎಂಬ ಸ್ನಾತಕೋತ್ತರ ಕೋರ್ಸ್​ಗಳನ್ನು ಸೇರ್ಪಡೆ ಮಾಡಲಾಗಿದೆ. ಈ ವಿಷಯಗಳಲ್ಲಿ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳ ಒಂದು ದೀರ್ಘ ಪಟ್ಟಿಯನ್ನು ಸೇರಿಸಲಾಗಿದೆ. ಇದು ಜನರ ಜೀವದ ಜೊತೆಗೆ ಚೆಲ್ಲಾಟ ಆಡಿದಂತಿದೆ ಎಂದಿದ್ದಾರೆ.

ಓದಿ:ಕೊಳಚೆ ಪ್ರದೇಶದ ನಿವಾಸಿಗಳಿಗೆ ಶೀಘ್ರ ಖಾಯಂ ಹಕ್ಕು ಪತ್ರ : ಸಚಿವ ವಿ.ಸೋಮಣ್ಣ

ಸಾರ್ವಜನಿಕ ಹಿತಾಸಕ್ತಿ ಮತ್ತು ಇತರ ವೈದ್ಯಕೀಯ ವ್ಯವಸ್ಥೆಯ ಹಿತದೃಷ್ಟಿಯಿಂದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಅಥವಾ ಹೆಚ್ಚಿನ ಪ್ರಯೋಜನಗಳಿಗಾಗಿ ಸಂಪೂರ್ಣ ಮಾರ್ಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details