ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ನನ್ನು ಎಸ್ಐಟಿ ಇಂದು ವಶಕ್ಕೆ ಪಡೆಯಲಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ಇಂದು ಎಸ್ಐಟಿ ವಶಕ್ಕೆ - ಮನ್ಸೂರ್ ಖಾನ್
ಎದೆ ನೋವಿನಿಂದ ಬಳಲುತ್ತಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ನನ್ನು ನಿನ್ನೆ ಡಿಸ್ಚಾರ್ಜ್ ಮಾಡಲಾಗಿದ್ದು, ಇಂದು ಆರೋಪಿಯನ್ನು ಎಸ್ಐಟಿ ವಶಕ್ಕೆ ಪಡೆಯಲಿದೆ.
ಎದೆ ನೋವು ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಪರಪ್ಪನ ಅಗ್ರಹಾರ ಸಿಬ್ಬಂದಿ ಮನ್ಸೂರ್ ಖಾನ್ನನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಮನ್ಸೂರ್ಗೆ ಅಂಜಿಯೋಗ್ರಾಂ ಅವಶ್ಯವಿಲ್ಲ ಎಂದು ಡಾಕ್ಟರ್ ವರದಿ ನೀಡಿದ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಮಾಡಲಾಗಿದೆ. ಹೀಗಾಗಿ ಬಾಡಿ ವಾರೆಂಟ್ ಮೂಲಕ ಮನ್ಸೂರ್ನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ
ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಆರೋಪಿಗೆ ತೀವ್ರ ಎದೆ ನೋವಿದ್ದು, ಅಂಜಿಯೋಗ್ರಾಂ ಅವಶ್ಯವಿರುವ ಬಗ್ಗೆ ಪ್ರಸ್ಥಾಪಿಸಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಡಿಸ್ಚಾರ್ಜ್ ಆದ ಕಾರಣ ಎಸ್ಐಟಿ ವಶಕ್ಕೆ ಪಡೆಯುವುದು ಬಹುತೇಕ ಖಚಿತವಾಗಿದೆ.