ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಆಸ್ತಿಯನ್ನ ಹರಾಜಿಗಿಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗ್ತಿದೆ.
ಐಎಂಎ ವಂಚನೆ ಪ್ರಕರಣ: ಶೀಘ್ರದಲ್ಲೇ ಮನ್ಸೂರ್ ಆಸ್ತಿ ಹರಾಜಿಗಿಡಲು ಸರ್ಕಾರದ ನಿರ್ಧಾರ - ಬೆಂಗಳೂರು ಸುದ್ದಿ
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಆಸ್ತಿಯನ್ನ ಶೀಘ್ರದಲ್ಲೇ ಹರಾಜಿಗಿಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.
ಈಗಾಗ್ಲೇ ಮನ್ಸೂರ್ ರಾಜ್ಯದ ವಿವಿಧೆಡೆ ಸೇರಿದಂತೆ ವಿದೇಶದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾನೆ. ಅಲ್ಲದೇ, ಮನ್ಸೂರ್ ತನ್ನ ಪತ್ನಿ ಹಾಗೂ ಕೆಲ ಸಂಬಂಧಿಕರ ಹೆಸರಿನಲ್ಲಿ 25 ಪ್ರಾಪರ್ಟಿಗಳನ್ನ ಹೊಂದಿದ್ದಾನೆ. ಹೀಗಾಗಿ ಜಿಲ್ಲಾಡಳಿತ ಸಕ್ಷಮ ಪ್ರಾಧಿಕಾರದ ಅಡಿ ಜೋಡಿಸಿ ಒಟ್ಟು ಆಸ್ತಿಪಾಸ್ತಿಯ ಮೌಲ್ಯವನ್ನ ಲೆಕ್ಕ ಹಾಕಿದ್ದಾರೆ. ಮನ್ಸೂರ್ ಖಾನ್ ಒಟ್ಟು 350 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು,ಅತೀ ಶೀಘ್ರದಲ್ಲಿ ಹರಾಜಿಗಿಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗ್ತಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ಹಲವಾರು ಮಂದಿಗೆ ಮನ್ಸೂರ್ ಖಾನ್ ದೋಖಾ ಮಾಡಿದ್ದ. ಹೀಗಾಗಿ ಎಸ್ಐಟಿ ಪ್ರಕರಣದ ತನಿಖೆಯನ್ನ ನಡೆಸಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಿತ್ತು. ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಮನ್ಸೂರ್ ಖಾನ್ ಆಸ್ತಿಯನ್ನ ಹರಾಜಿಗಿಟ್ಟು, ಐಎಂಎಯಿಂದ ಹಣ ಕಳೆದುಕೊಂಡವರಿಗೆ ವಾಪಸ್ ನೀಡಲು ಮುಂದಾಗಿದೆ.