ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳ ವಿಚಾರಣೆ ನಡೆಸಿದ್ದ ಸಿಬಿಐ ತನಿಖಾಧಿಕಾರಿಗಳು ಇದೀಗ ಐಪಿಎಸ್ ಅಧಿಕಾರಿಗಳನ್ನೂ ವಿಚಾರಣೆ ನಡೆಸಿದ್ದಾರೆ.
ಐಎಂಎ ವಂಚನೆ ಪ್ರಕರಣ.. ಐಪಿಎಸ್ ಅಧಿಕಾರಿಗಳನ್ನ ವಿಚಾರಣೆಗೊಳಪಡಿಸಿದ ಸಿಬಿಐ ತಂಡ - ಐಎಂಎ ಬಹುಕೋಟಿ ವಂಚನೆ ಪ್ರಕರಣ
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳ ವಿಚಾರಣೆ ನಡೆಸಿದ ಸಿಬಿಐ ತನಿಖಾಧಿಕಾರಿಗಳು ಇದೀಗ ಐಪಿಎಸ್ ಅಧಿಕಾರಿಗಳನ್ನೂ ವಿಚಾರಣೆಗೊಳಪಡಿಸಿದ್ದಾರೆ.
ಐಎಂಎ ವಂಚನೆ ಪ್ರಕರಣ
ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆರೋಪಿ ಮನ್ಸೂರ್ ಖಾನ್‌ನಿಂದ ಹಣ ಪಡೆದ ಆರೋಪದಲ್ಲಿ ಹೇಮಂತ್ ನಿಂಬಾಳ್ಕರ್ ವಿಚಾರಣೆ ನಡೆಸಿ, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿದ್ದಾಗ ಮನ್ಸೂರ್ ಖಾನ್‌ನಿಂದ ಹಣ ಪಡೆದ ಆರೋಪ ಇವರ ಮೇಲಿದೆ. ಇನ್ನೋರ್ವ ಐಪಿಎಸ್ ಅಧಿಕಾರಿಯನ್ನು ಸಹ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಮೂವರು ಐಎಎಸ್ ಅಧಿಕಾರಿಗಳಾದ ವಿಜಯ ಶಂಕರ್, ನಾಗರಾಜು ಹಾಗೂ ರಾಜಕುಮಾರ್ ಖತ್ರಿ ಅವರ ವಿಚಾರಣೆ ನಡೆಸಲಾಗಿದೆ.