ಬೆಂಗಳೂರು:ಹೈಟೆನ್ಶನ್ ವಿದ್ಯುತ್ ತಂತಿ, ಅಡಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡಗಳನ್ನು ತೆರವುಗೊಳಿಸಬೇಕು. ಟಿವಿ ಕೇಬಲ್, ಇಂಟರ್ನೆಟ್ ಕೇಬಲ್‌ಗಳನ್ನು ಅನಧಿಕೃತವಾಗಿ ಮರಗಳ ಮೇಲೆ, ಪಾದಾಚಾರಿ ರಸ್ತೆಗಳ ಮೇಲೆ ಹಾಕಿದ್ದರೆ ತೆರವುಗೊಳಿಸಬೇಕೆಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.
ಹೈ ಟೆನ್ಷನ್ ಲೈನ್ ಕೆಳಗೆ ಅನಧಿಕೃತವಾಗಿ ಕಟ್ಟಡ, ಶೆಡ್‌ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಈ ಸಂಬಂಧ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಬೆಸ್ಕಾಂನಿಂದ ನೋಟಿಸ್ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, 15 ದಿನಗಳ ಒಳಗಾಗಿ ಸ್ವತಃ ತೆರವಾಗಲು ಸೂಚನೆ ನೀಡಬೇಕು. ತೆರವಾಗದಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡವನ್ನು ತೆರವುಗೊಳಿಸಿ. ಅದರ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.