ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ.ಬಿಮನ್ ಬಗಚಿ ಅವರು ಜೋಯಲ್ ಹೆನ್ರಿ ಹಿಲ್ದಬ್ರಾಂಡ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
'ಥಿಯಾಟರಿಕಲ್ ಮತ್ತು ಎಕ್ಸ್ಪಿರಿಮೆಂಟಲ್ ಕೆಮೆಸ್ಟ್ರಿ ಆಫ್ ಲಿಕ್ವಿಡ್ಸ್' ಕುರಿತ ಸಾಧನೆ ಹಿನ್ನೆಲೆ ಇವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ 2021ನೇ ಸಾಧಕರಾಗಿ ಪ್ರೊ.ಬಿಮನ್ ಅವರು ಹೊರಹೊಮ್ಮಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕನ್ ಕೆಮಿಕಲ್ ಸೊಸೈಟಿಯ ಹಿರಿಯ ಮ್ಯಾನೇಜರ್ ಫೆಲಿಸಿಯಾ ಅವರು ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಪ್ರೊ.ಬಿಮನ್ ಅವರಿಗೆ ಈಮೇಲ್ ಕಳುಹಿಸಿದ್ದಾರೆ. 2021ರ ಮಾರ್ಚ್ 23 ರಂದು ಟೆಕ್ಸಾಸ್ನ ಸ್ಯಾನ್ ಆಂಟೋನಿಯೋದಲ್ಲಿ ನಡೆಯಲಿರುವ ರಾಷ್ಟ್ರೀಯ ಸಭೆ ಹಾಗೂ ಎಕ್ಸ್ಪೋದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ.
ಲಿಕ್ವಿಡ್ಸ್ (ದ್ರವ) ಹಾಗೂ ಅನಿಲಗಳ ಕುರಿತ ಅಧ್ಯಯನದಲ್ಲಿ ಇದು ಮಹತ್ವದ ಪ್ರಶಸ್ತಿಯಾಗಿದ್ದು, ಬಹಳ ವರ್ಷಗಳ ನಂತರ ಭಾರತಕ್ಕೆ ಸಂದಿದೆ.