ಕರ್ನಾಟಕ

karnataka

ETV Bharat / city

ಚಾಮರಾಜಪೇಟೆ ಈದ್ಗಾ ಮೈದಾನ: ದಾಖಲೆ ಸಲ್ಲಿಸುವಂತೆ ವಕ್ಫ್​ ಬೋರ್ಡ್​ಗೆ ಪಾಲಿಕೆಯಿಂದ ನೋಟಿಸ್

ಇಸಿ ಫಾರಂ 15 ರ 1968 ರಿಂದ ಈವರೆಗಿನ ದೃಢೀಕೃತ ಪ್ರತಿಗಳನ್ನು ಏಳು ದಿನಗಳೊಳಗೆ ಸಲ್ಲಿಕೆ ಮಾಡಲು ವಕ್ಫ್​ ಬೋರ್ಡ್​ಗೆ ಬಿಬಿಎಂಪಿ ಸೂಚನೆ ನೀಡಿದೆ.

BBMP Special Commissioner Dr. Harish Kumar
ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್

By

Published : Jul 1, 2022, 6:22 PM IST

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ವಕ್ಫ್​ ಬೋರ್ಡ್​ಗೆ ಮತ್ತೊಂದು ನೋಟಿಸ್ ನೀಡಿರುವ ಬಿಬಿಎಂಪಿ ದಾಖಲೆ ಸಲ್ಲಿಕೆ ಮಾಡಲು ತಿಳಿಸಿದೆ. ತಮ್ಮ ಸ್ವತ್ತು ಆಗಿದ್ದಲ್ಲಿ ಮೂಲ‌ ದಾಖಲೆ ಸಲ್ಲಿಸಿ ಸಾಬೀತು ಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ನ್ಯಾಯಾಲಯದಿಂದ ಆದೇಶದ ದೃಢೀಕರಣ ಪತ್ರ, ಸ್ವತ್ತಿನ‌ ಮೂಲಪತ್ರ, ಕ್ರಯಪತ್ರ ದೃಢೀಕರಣ ಪ್ರತಿ, ಸ್ವತ್ತಿನ‌ ಪಹಣಿ, 1968ರಿಂದ ತಹಶೀಲ್ದಾರ ಅವರಿಂದ ತಹಲ್​ವರೆಗೂ ಪಡೆದುಕೊಂಡಿರುವ ದೃಢೀಕರಣ ಪತ್ರ, ಬೆಂಗಳೂರು ಡೆವೆಲಪ್ಮೆಂಟ್ ಬೋರ್ಡ್ ರಚಿಸಿರುವ ಲೇಔಟ್ ನಕ್ಷೆ, ದೃಢೀಕರಣ ಪತ್ರ ನೀಡಲು ತಿಳಿಸಲಾಗಿದೆ.


ಏಳು ದಿನಗಳೊಳಗೆ ದಾಖಲೆ ಸಲ್ಲಿಸಿ:ಖೇತವಾರು ಪತ್ರಿಕೆ, ಪೈಸಲ್ ಪತ್ರಿಕೆ‌, ತಹಶೀಲ್ದಾರ ಅವರಿಂದ ಪಡೆದ ದೃಢೀಕೃತ ಪ್ರತಿ, ಸರ್ಕಾರದಿಂದ ಬಂದಿರುವ ಆಸ್ತಿ ಪ್ರಕಟಣಾ ಪತ್ರ, ಭೂಮಾಪನ ಇಲಾಖೆಯಿಂದ ಪಡೆದ ದೃಢೀಕೃತ ಪ್ರತಿ ಹಾಗೂ ಇಸಿ ಫಾರಂ 15 ರ 1968 ರಿಂದ ಈವರೆಗಿನ ದೃಢೀಕೃತ ಪ್ರತಿಗಳನ್ನು ಏಳು ದಿನಗಳ ಒಳಗೆ ಸಲ್ಲಿಕೆ ಮಾಡಲು ಪಾಲಿಕೆ ಸೂಚನೆ ನೀಡಿದೆ.

ಇದನ್ನೂ ಓದಿ:ಚಾಮರಾಜಪೇಟೆ ಈದ್ಗಾ ಮೈದಾನ ಪಾಲಿಕೆ ಸ್ವತ್ತಲ್ಲ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ABOUT THE AUTHOR

...view details