ಬೆಂಗಳೂರು: ನಾನು ರಾಜಕೀಯ ಪ್ರಾರಂಭ ಮಾಡಿದ್ದು ಕಾಂಗ್ರೆಸ್ನಿಂದಲೇ, ಆದರೆ ನಂತರ ವಿವಿಧ ಕಾರಣದಿಂದ ಕಾಂಗ್ರೆಸ್ ಬಿಟ್ಟೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ರಾಜಕೀಯ ಜೀವನದ ಇತಿಹಾಸವನ್ನು ಮೆಲುಕು ಹಾಕಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಸ್ವತಂತ್ರ ನಂತರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದೆ. ಕಾಂಗ್ರೆಸ್ ಮೇಲೆ ನನಗೆ ಈಗಲೂ ಗೌರವ ಇದೆ. ನಾನು ಆ ಪಕ್ಷದ ಬಗ್ಗೆ ಏನೇನು ಮಾತನಾಡೋಲ್ಲ. ನಂತರ ನಾನು ಜೆ.ಪಿ. ಜೊತೆ ಸೇರಿಕೊಂಡೆ. ನನ್ನನ್ನು ಸಿಎಂ ಮಾಡೋದಕ್ಕೆ ಇಂದಿರಾ ಗಾಂಧಿಯೂ ಒಪ್ಪಿದ್ದಾರೆ ಎಂದು ಅಂದಿನ ದಿನ ನನಗೆ ಕಾಂಗ್ರೆಸ್ ತೊರೆಯದಂತೆ ಮನವಿ ಮಾಡಿದ್ರು. ಆದ್ರೆ ನಾನು ನನ್ನ ಪಕ್ಷ ಬಿಟ್ಟು ಬರೋದಿಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ. ಅಂದಿನಿಂದ ಇಂದಿನವರೆಗೂ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ ಎಂದು ಸ್ಮರಿಸಿದರು.