ಕರ್ನಾಟಕ

karnataka

ETV Bharat / city

ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ - ಪ್ರಥಮ ಪಿಯುಸಿ ದಾಖಲಾತಿ ವಿಸ್ತರಿಸಿ ಆದೇಶ

ಪ್ರಥಮ ಪಿಯುಸಿ ದಾಖಲಾತಿಯನ್ನು ನ. 27ರಿಂದ ಡಿಸೆಂಬರ್​ 12ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Department of Undergraduate Education
ಪದವಿ ಪೂರ್ವ ಶಿಕ್ಷಣ ಇಲಾಖೆ

By

Published : Nov 26, 2020, 6:58 PM IST

ಬೆಂಗಳೂರು:ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಪ್ರಥಮ ಪಿಯುಸಿ ದಾಖಲಾತಿಗೆ ಕೊನೆಯ ದಿನಾಂಕವನ್ನು ನ. 27ರಿಂದ ಡಿಸೆಂಬರ್​ 12ರವರೆಗೆ ವಿಸ್ತರಿಸಲಾಗಿದೆ. ದಾಖಲಾತಿ ಶುಲ್ಕವನ್ನು ಖಜಾನೆಗೆ ಕಾರ್ಯನಿರತ ದಿನದಂದು ಕಡ್ಡಾಯವಾಗಿ ಪಾವತಿಸಲು ಸುತ್ತೋಲೆ ಹೊರಡಿಸಲಾಗಿದೆ.

ಜೊತೆಗೆ ವಿಶೇಷ ಸೂಚನೆಯನ್ನೂ ನೀಡಲಾಗಿದ್ದು, 2020-21ನೇ ಸಾಲಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಪ್ರಥಮ ಪಿಯುಸಿ ದಾಖಲಾತಿ ಮತ್ತು ಪಿಯುಸಿ ಕಾಲೇಜು ಬದಲಾವಣೆ ಪ್ರಕ್ರಿಯೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ABOUT THE AUTHOR

...view details