ಬೆಂಗಳೂರು:ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾನು ಇಡಿ ಅಥವಾ ಐಟಿ ಆಫೀಸರ್ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹೇಳಿಕೆಗೆ ಟಾಂಗ್ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಇದರ ಬಗ್ಗೆ ಉತ್ತರ ನೀಡಲು ಆಗಲ್ಲ. ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ ದಾಳಿ ಆಗುತ್ತದೆ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ಆ ರೀತಿ ಆರೋಪ ಮಾಡುತ್ತಾರೆ. ಐಟಿ, ಇಡಿಯವರಿಗೆ ಗೊತ್ತಿರುತ್ತದೆ ಎಂದರು. ಇನ್ನು ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಳೆ ಖಾತೆ ಹಂಚಿಕೆ ವಿಚಾರ ಬಗೆಹರಿಯಲಿದೆ. ಜಿಲ್ಲಾ ಉಸ್ತುವಾರಿ ಈಗ ಕೊಟ್ಟಿರುವುದು ತಾತ್ಕಾಲಿಕ ಎಂದರು.