ಬೆಂಗಳೂರು:ಸೋಲು - ಗೆಲುವು ಅನ್ನೋದಕ್ಕಿಂತ ಅಸ್ಥಿರತೆ, ಸ್ಥಿರತೆ ಬಗ್ಗೆ ಜನ ಯೋಚಿಸಿದ್ದಾರೆ. ಯಡಿಯೂರಪ್ಪ ಸರ್ಕಾರ ಮುಂದುವರೆಸೋದು ಜನರ ಉದ್ದೇಶ ಮತ್ತು ಸ್ಥಿರ ಸರ್ಕಾರದ ಕುರಿತು ಯೋಚಿಸ್ತಿದ್ದಾರೆ. ನಾನು ಉಪ ಚುನಾವಣೆಗಳಲ್ಲಿ ಮಾಸ್ಟರ್. ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಯಡಿಯೂರಪ್ಪರನ್ನ ಕೈ ಬಿಡಲ್ಲ. ನೂರಕ್ಕೆ ನೂರು ಬಿಜೆಪಿ ಸರ್ಕಾರ ಮುಂದುವರೆಯುತ್ತದೆ ಎಂದರು.
ನಾನು ಉಪ ಚುನಾವಣೆಯ ಮಾಸ್ಟರ್, 12-13ರಲ್ಲಿ ಬಿಜೆಪಿ ಗೆಲುವು ಖಚಿತ: ಸೋಮಣ್ಣ ವಿಶ್ವಾಸ - ಉಪಚುನಾವಣೆಯ ಮಾಸ್ಟರ್ ಸೋಮಣ್ಣ
ನಾನು ಉಪ ಚುನಾವಣೆಗಳಲ್ಲಿ ಮಾಸ್ಟರ್. ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ... ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ.
ಸಚಿವ ವಿ.ಸೋಮಣ್ಣ
ಕೆಆರ್ ಪೇಟೆಯಲ್ಲಿ ಮಧ್ಯಾಹ್ನದ ಮೇಲೆ ಉತ್ತಮ ಮತದಾನ ನಡೀತು. ಕೆ.ಆರ್.ಪೇಟೆ ಮತ್ತು ಹುಣಸೂರು ಎರಡೂ ಕಡೆ ಅಚ್ಚರಿಯ ಫಲಿತಾಂಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated : Dec 7, 2019, 11:41 AM IST