ಬೆಂಗಳೂರು: ಶೀಲ ಶಂಕಿಸಿದ ಪತಿಯೊಬ್ಬ ತನ್ನ ಪತ್ನಿಯನ್ನು ಮುದ್ದೆ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನೆಡೆದಿದೆ. ನಾಗೇಗೌಡನ ಪಾಳ್ಯದ ನಿವಾಸಿ ಪದ್ಮಾ (45) ಕೊಲೆಯಾದವರು. ಆರೋಪಿ ಮಾರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಾರಪ್ಪ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ಜಗಳವಾಡುತ್ತಿದ್ದ. ನಿನ್ನೆ ಸಂಜೆಯೂ ಕಲಹ ಆರಂಭವಾಗಿ ತಾರಕಕ್ಕೇರಿದೆ. ಈ ವೇಳೆ ಕೈಗೆ ಸಿಕ್ಕ ಮುದ್ದೆ ಕೋಲಿನಿಂದ ಪತ್ನಿಗೆ ಹೊಡೆದಿದ್ದಾನೆ.