ಕರ್ನಾಟಕ

karnataka

ETV Bharat / city

ಹುಳಿಮಾವು ಪೊಲೀಸರ ಕಾರ್ಯಾಚರಣೆ: ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ - ಹುಳಿಮಾವು ಪೊಲೀಸರ ಕಾರ್ಯಾಚರಣೆ

ಬಿಹಾರ ಮೂಲದ ಮೊಹಮದ್ ಸುಲ್ತಾನ್ ಅನ್ಸಾರಿ ಬಂಧಿತ ಆರೋಪಿ‌. ಈತನಿಂದ ಸುಮಾರು 2 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬೆಂಗಳೂರಿನ ಟಿ.ಜಾನ್ ಕಾಲೇಜಿನ ಹಿಂಬದಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ರೆಡ್‌ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಪೆಡ್ಲರ್
ಗಾಂಜಾ ಪೆಡ್ಲರ್

By

Published : Feb 26, 2021, 3:02 PM IST

ಬೆಂಗಳೂರು:ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಪೆಡ್ಲರ್​ ಒಬ್ಬನನ್ನು ಹುಳಿಮಾವು ಪೊಲೀಸರು ಕಾರ್ಯಾಚರಣೆ ನೆಡಸಿ ಬಂಧಿಸಿದ್ದಾರೆ.

ಬಿಹಾರ ಮೂಲದ ಮೊಹಮದ್ ಸುಲ್ತಾನ್ ಅನ್ಸಾರಿ ಬಂಧಿತ ಆರೋಪಿ‌. ಈತನಿಂದ ಸುಮಾರು 2 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬೆಂಗಳೂರಿನ ಟಿ.ಜಾನ್ ಕಾಲೇಜಿನ ಹಿಂಬದಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ರೆಡ್‌ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿ ಬಳಿ ನೆಪಕ್ಕೆ ಬೀಡಾ ಅಂಗಡಿ ಇಟ್ಟುಕೊಂಡಿರುವ ಆರೋಪಿಯಿಂದ ಮಾಹಿತಿ ಪಡೆದು, ಗಾಂಜಾ ಮಾರಾಟ ಜಾಲದಲ್ಲಿರುವ ಇತರರನ್ನು ಸೆರೆ ಹಿಡಿಯಲು ಹುಳಿಮಾವು ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ.

ABOUT THE AUTHOR

...view details