ಕರ್ನಾಟಕ

karnataka

ETV Bharat / city

ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿ ಜಾನಪದ ಜಾತ್ರೆ

ಸಚಿವರಾದ ವಿ.ಸೋಮಣ್ಣ ಹಾಗೂ ಆರ್.ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಅವರು ಜಾನಪದ ಜಾತ್ರೆಗೆ ಮಂಗಳವಾರ ಚಾಲನೆ ನೀಡಿದರು.

huge folk fair in silicon city
ಜನಪದ ಜಾತ್ರೆ

By

Published : Jan 15, 2020, 7:03 AM IST

Updated : Jan 15, 2020, 8:06 AM IST

ಬೆಂಗಳೂರು: ನಾಡಿಗೆಲ್ಲ ಸಂಕ್ರಾಂತಿ ಸಂಭ್ರಮದ ಜೊತೆಗೆ ಸಿಲಿಕಾನ್ ಸಿಟಿಯ ಜನರಿಗಾಗಿ ಎರಡು ದಿನಗಳ ಜಾನಪದ ಜಾತ್ರೆಯನ್ನು ಪದ್ಮನಾಭನಗರದಲ್ಲಿ ಆಯೋಜಿಸಲಾಗಿದ್ದು, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದರು.

ವಿ.ಸೋಮಣ್ಣ ಮಾತನಾಡಿ, ಈ ಕಾರ್ಯಕ್ರಮಕ್ಕೆ ಬಂದಿರುವ ಜನರನ್ನು ನೋಡಿದರೆ ಮೈಸೂರು ದಸರಾ ನೆನಪಿಗೆ ಬರುತ್ತಿದೆ. ಪದ್ಮನಾಭ ನಗರ ಕನ್ನಡ ಮತ್ತು ಸಂಸ್ಕೃತಿ, ಸಂಕ್ರಾಂತಿ ಹಬ್ಬದ ನಿಟ್ಟಿನಲ್ಲಿ ಕಲೆ ಬಿಂಬಿಸುತ್ತಿದೆ ಎಂದು ತಿಳಿಸಿದರು.

ಜಾನಪದ ಜಾತ್ರೆ

ಸಚಿವ ಆರ್.ಆಶೋಕ್ ಮಾತನಾಡಿ, ಬೆಂಗಳೂರು ಐಟಿ‌-ಬಿಟಿಗೆ ಪ್ರಸಿದ್ದಿಯಾಗಿದೆ. ಅದರಂತೆ ಸಾಂಸ್ಕೃತಿಕ ಕಲೆಗಳ ಬೀಡು ಆಗಬೇಕು. ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಧಾರವಾಡ, ಮಂಗಳೂರು...ಹೀಗೆ ಹಲವೆಡೆ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.

ಜಾನಪದ ಜಾತ್ರೆಗೆ ಬಂದಿದ್ದ ಸಾರ್ವಜನಿಕರಿಗೆ ಎಳ್ಳು,ಬೆಲ್ಲ ಹಾಗೂ ಕಬ್ಬು ಉಚಿತವಾಗಿ ನೀಡಲಾಯಿತು‌. ಪೂಜಾ ಕುಣಿತ, ಸಂಗೀತ ಕಾರ್ಯಕ್ರಮಗಳ, ವಿವಿಧ ಜಾನಪದ ಕುಣಿತಗಳು ನೆರೆದಿದ್ದವರನ್ನು ರಂಜಿಸಿದವು.

Last Updated : Jan 15, 2020, 8:06 AM IST

ABOUT THE AUTHOR

...view details