ಕರ್ನಾಟಕ

karnataka

ETV Bharat / city

ಅಪರಾಧ ಪ್ರಕರಣಗಳಲ್ಲಿ ಇಳಿಕೆ...ಜನರ ಆರೋಗ್ಯಕ್ಕಾಗಿ ಹೊಯ್ಸಳ ಸಿಬ್ಬಂದಿ ಕೆಲಸ - ಬೆಂಗಳೂರು ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾದ ಕಾರಣ, ಹೊಯ್ಸಳ ಸಿಬ್ಬಂದಿ ಹೆಲ್ತ್​ ಸರ್ವಿಸ್​ನಲ್ಲಿ ಕೆಲಸ ಮಾಡ್ತಾರೆಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​ ತಿಳಿಸಿದ್ದಾರೆ.

Hoysala staff will work for the health of the people
ಕಡಿಮೆಯಾಗುತ್ತಿರುವ ಅಪರಾಧ ಪ್ರಕರಣ...ಜನರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸಲಿದ್ದಾರೆ ಹೊಯ್ಸಳ ಸಿಬ್ಬಂದಿ

By

Published : Apr 3, 2020, 5:29 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾದ ಕಾರಣ, ಹೊಯ್ಸಳ ಸಿಬ್ಬಂದಿ ಹೆಲ್ತ್​ ಸರ್ವಿಸ್​ನಲ್ಲಿ ಮಾಡ್ತಾರೆಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​ ತಿಳಿಸಿದ್ದಾರೆ.

ಕಡಿಮೆಯಾಗುತ್ತಿರುವ ಅಪರಾಧ ಪ್ರಕರಣ...ಜನರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸಲಿದ್ದಾರೆ ಹೊಯ್ಸಳ ಸಿಬ್ಬಂದಿ

ಅಪರಾಧ ಚಟುವಟಿಕೆಗಳನ್ನು ನಿಯಂತ್ರಣಕ್ಕಾಗಿ ಬೆಂಗಳೂರು ನಗರದ ಪ್ರತಿ ಪೊಲೀಸ್ ಠಾಣೆಯಲ್ಲಿ ಮೂರು ಹೊಯ್ಸಳ ವಾಹನಗಳಿವೆ. ಆದರೆ, ಮಾರ್ಚ್ 1 ರಿಂದ 15ನೇ ತಾರೀಖಿನವರೆಗೂ 2,240 ಪ್ರಕರಣ ಪತ್ತೆಯಾಗಿದ್ದವು. ಆದರೆ, ಮಾರ್ಚ್ 16 ರಿಂದ 31 ರವೆರಗೂ 1312 ಕೇಸ್ ಪತ್ತೆಯಾಗಿದೆ. ಕಳೆದ ಎರಡು ವರ್ಷಗಳಿಗೆ ಹೊಲಿಸುವುದಾದರೆ ಅಪರಾಧಗಳು ಬಹಳ ಕಡಿಮೆಯಾಗಿವೆ.

ಹೀಗಾಗಿ ಆಯ ಠಾಣೆಯ ಹೊಯ್ಸಳ ಮೂರು ಶಿಪ್ಟ್ ಗಳಲ್ಲಿ ಕೆಲಸ ಮಾಡ್ತಿದ್ದು, ಕಳೆದ ಮೂರು ದಿನಗಳಿಂದ ಕೀಮೊಥೆರಪಿ, ಡಯಾಲಿಸಿಸ್, ಹಾರ್ಟ್ ಡಿಸೀಸ್ ಇಂಥವರಿಗೆ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. 100ಗೆ ಕರೆ ಮಾಡಿದ್ರೆ ಸಾಕು ಎಷ್ಟೇ ದೂರವಿರಲಿ ಅವರನ್ನ ಅವರು ಹೇಳಿದ ಆಸ್ಪತ್ರೆಗೆ ಬಿಡೋ ಕೆಲಸ ಮಾಡಲಾಗ್ತಿದೆ.

ಕೊರೊನಾ ಸಂಬಂಧಿಸಿದ ಕೇಸ್​ಗೆ ಬೇರೆ ಆಂಬುಲೆನ್ಸ್ ಬಳಸಲಾಗ್ತಿದೆ. ಈಗ ವಯೋವೃದ್ಧರು ಮತ್ತು ಅನಾರೋಗ್ಯ ಇರುವವರ ಸಹಾಯಕ್ಕೆ ಹೊಯ್ಸಳ ಬಳಸಲು ಸೂಚಿಸಿದ್ದೇನೆ. ಹೆಚ್ಚಿನ‌ ಕರೆಗಳು ಬರ್ತಿದ್ದು, ಎಲ್ಲರಿಗೂ ಸ್ಪಂದಿಸ್ತಿದ್ದೇವೆ. ಪೊಲೀಸ್ ಇಲಾಖೆಯಿಂದ ಕೊರೊನಾಕ್ಕಾಗಿ ಸಹಾಯ ಆಗಲಿ ಅನ್ನೋದೆ ನಮ್ಮ ಇಚ್ಚೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ABOUT THE AUTHOR

...view details