ಕರ್ನಾಟಕ

karnataka

ETV Bharat / city

ಒಂದೇ ಕುಟುಂಬದ ಐವರ ಸಾವು ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಐವರ ಆತ್ಮಹತ್ಯೆ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಮನೆ ಮಾಲೀಕ ಹಲ್ಲೆಗೇರೆ ಶಂಕರ್ ಸೆಪ್ಟೆಂಬರ್ 12ರ ಭಾನುವಾರ ಮನೆಯಿಂದ ಹೊರಹೋಗಿದ್ದರು. ವಾಪಸ್​ ಬಂದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರ ಉಸಿರು ನಿಂತಿತ್ತು.

Bangalore suicide case
ಐವರ ಸಾವು ಪ್ರಕರಣ

By

Published : Sep 18, 2021, 12:04 PM IST

ಬೆಂಗಳೂರು: ಒಂದೇ ಕುಟುಂಬದ ಐವರ ಸಾವು ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬಾಗಿಲ ಬಳಿ ಬಂದು ನಿಂತ ಮನೆ ಮಾಲೀಕನ ಮೂಗಿಗೆ ವಾಸನೆ ಬಂದು ಬಡಿದಿತ್ತು. ಕಿಟಕಿ ಬಾಗಿಲು ಒಡೆದು‌ ನೋಡಿದಾಗ ಆಕಾಶವೇ ಕಳಚಿ ಬಿದ್ದಂತೆ ಇತ್ತು. ಹಾಗಾದರೆ ಆತ ಮನೆಗೆ ಬಂದಿದ್ದು ಯಾವಾಗ, ಯಾರ್ಯಾರ ಮೃತದೇಹ ಎಲ್ಲೆಲ್ಲಿ ಇತ್ತು‌, ಪ್ರಕರಣದ ಡೀಟೇಲ್ಸ್​​​​ ಈಗ ಹೊರ ಬಿದ್ದಿದೆ.

ಘನಘೋರ ಘಟನೆಯೊಂದು ಅಂಧ್ರಳ್ಳಿ ಮುಖ್ಯರಸ್ತೆಯ ಚೇತನ್ ಸರ್ಕಲ್​ನ ವಿನಾಯಕ ನಗರದ ಮನೆಯಲ್ಲಿ ನಡೆದು ಹೋಗಿತ್ತು. ಭಾನುವಾರ ಮನೆಯಿಂದ ಹೊರ ಹೋಗಿದ್ದ ಮಾಲೀಕ ಹಲ್ಲೆಗೇರೆ ಶಂಕರ್ ವಾಪಸ್​ ಬಂದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರ ಉಸಿರು ನಿಂತಿತ್ತು.

ಮನೆ ಮಾಲೀಕನಿಗೆ ಕಾದಿತ್ತು ಶಾಕ್​:

ಸೆಪ್ಟೆಂಬರ್ 12ರ ಭಾನುವಾರ ಮನೆಯಿಂದ ಹೊರಹೋಗಿದ್ದರು. ಕುಟುಂಬಸ್ಥರು ಭಾನುವಾರ ಅಥವಾ ಸೋಮವಾರದಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸೆ.17ರ ಸಂಜೆ 4.30 ರಿಂದ 5 ಗಂಟೆ ಸುಮಾರಿಗೆ ಮನೆ ಮಾಲೀಕ ಮನೆ ಬಳಿ ಬಂದಿದ್ದಾನೆ. 5.05 ಗಂಟೆಗೆ ಪಕ್ಕದ ಮನೆಯವರನ್ನು ಕರೆಸಿ ವಿಚಾರಿಸಿದ್ದರು. 5.10ಕ್ಕೆ ಮನೆಯಿಂದ ಹೋರಹೋಗಿ ಬೀಟ್ ಪೊಲೀಸರನ್ನು‌ ಕರೆತಂದಿದ್ದಾರೆ. 5.20ಕ್ಕೆ ಮನೆ ಬಳಿ ಬಂದ ಹೊಯ್ಸಳ ಪೊಲೀಸರು ಕಿಟಕಿ ಒಡೆದು ನೋಡಿದಾಗ ಶಂಕರ್ ಪತ್ನಿ‌ ಮೃತದೇಹ ಕಂಡಿದೆ. 6 ರಿಂದ 6.30 ಗಂಟೆಯ ಸುಮಾರಿಗೆ ಸ್ಥಳಕ್ಕೆ ಬಂದ ಇನ್ಸ್​​ಪೆಕ್ಟರ್ ಬಾಗಿಲು ಒಡೆದು‌ ಒಳಹೋದಾಗ ಐವರ ಮೃತದೇಹ ಪತ್ತೆಯಾಗಿದೆ‌.

ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ:

ಮೊದಲ ಮಹಡಿಯ ಹಾಲ್​ನಲ್ಲಿ ಶಂಕರ್ ಪತ್ನಿ‌ ಭಾರತಿ, ಮತ್ತೊಂದು ಕೊಠಡಿಯಲ್ಲಿ ಪುತ್ರಿ ಸಿಂಧೂರಾಣಿ ಮತ್ತು ಆಕೆಯ 9 ತಿಂಗಳ ಮಗಳ ಮೃತದೇಹ ಪತ್ತೆಯಾಗಿದೆ‌‌. ಎರಡನೇ ಮಹಡಿಯಲ್ಲಿ ಶಂಕರ್​ನ ಹಿರಿಯ ಮಗಳು ಸಿಂಚನಾ ಮತ್ತು ಪುತ್ರ ಮಧುಸಾಗರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮೈಸೂರು ಸೇರಿದಂತೆ ಬೇರೆ-ಬೇರೆ ನಗರಕ್ಕೆ ತೆರಳಿದ್ದ ಹಲ್ಲೇಗೆರೆ ಶಂಕರ್ 17ರ ಸಂಜೆ ಅಂದ್ರೆ ನಿನ್ನೆ 4.30ರಿಂದ 5 ಗಂಟೆ ಸುಮಾರಿಗೆ ಮನೆ ಬಳಿಗೆ ಬಂದಿದ್ದಾರೆ. ಮನೆ ಬಳಿ ವಾಸನೆ ಬರುತ್ತಿದ್ದಿದ್ದರಿಂದ ಪಕ್ಕದ ಮನೆಯವರಿಗೆ ಯಾರಾದರೂ ಹೊರಬಂದಿದ್ದರಾ ಎಂದು ವಿಚಾರಿಸಿದ್ದ. ಅಲ್ಲದೇ ದುರ್ವಾಸನೆ ಬರುತ್ತಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡುವಂತೆ ಪಕ್ಕದ ಮನೆಯ ನಿವಾಸಿ ಪರಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: 5 ದಿನದಿಂದ ಶವಗಳ ಮಧ್ಯೆಯೇ ಅನ್ನ-ನೀರಿಲ್ಲದೆ ಬದುಕಿದ ಕಂದಮ್ಮ

ಅದರಂತೆ 5.10ಕ್ಕೆ ಮನೆಯಿಂದ ಸ್ವಲ್ಪ ದೂರ ಬಂದಿದ್ದ ಶಂಕರ್ ನಂ. 100ಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾನೆ. 5.20ಕ್ಕೆ ಬಂದ ಬೀಟ್ ಪೊಲೀಸರಿಗೆ ಹಾಲ್​ನಲ್ಲಿ ಶಂಕರ್ ಪತ್ನಿ ಭಾರತಿ ಮೃತದೇಹ ಕಂಡಿದೆ. ಏನೋ‌ ಎಡವಟ್ಟಾಗಿದೆ ಅಂದುಕೊಂಡವರು ಇನ್ಸ್​ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆ ಇನ್ಸ್​​​​ಪೆಕ್ಟರ್ 6 ರಿಂದ 6.30 ಸುಮಾರಿಗೆ ಬಂದು ಬಾಗಿಲು ಒಡೆದು ಮನೆ ಒಳಗೆ ಹೋಗಿದ್ದು, ಮೃತದೇಹಗಳು ಕಂಡಿದೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ:ಮಗುವಿಗೆ ಕಿವಿ ಚುಚ್ಚಿಸುವ ವಿಚಾರದಲ್ಲಾದ ಮನಸ್ತಾಪವೇ ಐವರ ಸಾವಿಗೆ ಕಾರಣವಾಯ್ತಾ?

ಮನೆಯ ಕೆಳ‌ ಮಹಡಿಯನ್ನು ಬಾಡಿಗೆಗೆ ನೀಡಿದ್ದರು. ಮೊದಲ ಮಹಡಿಯ ಹಾಲ್​​ನಲ್ಲಿ ಶಂಕರ್ ಪತ್ನಿ ಭಾರತಿ ಮೃತದೇಹ ಇತ್ತು. ಇದ್ದ ಒಂದು ರೂಮ್​​ನಲ್ಲಿ ಕಿರಿಯ ಪುತ್ರಿ ಸಿಂಧೂರಾಣಿ ಮತ್ತು ಆಕೆಯ 9 ತಿಂಗಳ ಮಗು ಮೃತದೇಹ ಪತ್ತೆಯಾದರೆ, ಎರಡನೇ ಮಹಡಿಯ ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನಾ ಮತ್ತು ಪುತ್ರ ಮಧುಸಾಗರ್ ಮೃತದೇಹ ನೇತಾಡುತ್ತಿತ್ತು. ಇಷ್ಟೆಲ್ಲ ಆಗ್ತಿದ್ದಂತೆ ಶಂಕರ್ ಅವರನ್ನು ಪೊಲೀಸರು ಬ್ಯಾಡರಹಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಶಂಕರ್ ಅವರು ಅಸಹಜ ಸಾವು ಎಂದು ದೂರು ಬರೆದುಕೊಟ್ಟಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details