ಬೆಂಗಳೂರು: ದೆಹಲಿಯಿಂದ ರೈಲಿನಲ್ಲಿ ನಗರಕ್ಕೆ ಬಂದು ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸಿಕೊಂಡು ಕಳ್ಳತನ ಮಾಡುತ್ತಿದ್ದ ನಾಲ್ವರು ಮನೆಗಳ್ಳರನ್ನು ಹನುಮಂತನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುನೀಲ್ ಮಿಶ್ರಾ, ಅಲಿಮುದ್ದೀನ್, ಯಾಸೀರ್ ಅನ್ಸಾರಿ, ಹಾಗೂ ವಿರೇಂದ್ರ ಗುಪ್ತಾ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 200 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರೈಲಿನ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಖದೀಮರು, ಮೆಜೆಸ್ಟಿಕ್ ಸುತ್ತಮುತ್ತಲಿನ ಲಾಡ್ಜ್ಗಳಲ್ಲಿ ಉಳಿದುಕೊಂಡು ಹಗಲಿನಲ್ಲಿ ಹಲವೆಡೆ ಸುತ್ತಾಡಿ ಒಂಟಿ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.
ದೆಹಲಿ ಮೂಲದ 'ಕಾನ್ಫರೆನ್ಸ್ ಕಾಲ್' ಕಳ್ಳರನ್ನ ಬಂಧನ ಚಾಲಾಕಿ ಕಾನ್ಫರೆನ್ಸ್ ಕಾಲ್ ಕಳ್ಳರ ಗ್ಯಾಂಗ್ ಅಂದರ್
ಹಗಲಿನಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಚಾಲಾಕಿಗಳು ರಾತ್ರಿ ವೇಳೆ ಕಾನ್ಫರೆನ್ಸ್ ಕಾಲ್ ಮೂಲಕ ಜೊತೆ ಜೊತೆಯಾಗಿಯೇ ಕೈಚಳಕ ತೋರುತ್ತಿದ್ದರು. ಇದಕ್ಕಾಗಿ ಪ್ರತ್ಯೇಕ ಸಿಮ್ ಕಾರ್ಡ್ಗಳನ್ನು ಬಳಸುತ್ತಿದ್ದರು. ಕಳ್ಳತನಕ್ಕೂ ಮುನ್ನ ಕಾನ್ಫರೆನ್ಸ್ ಕಾಲ್ ಮಾಡಿ ಇಬ್ಬರು ಮನೆಯೊಳಗೆ ಹೋದ್ರೆ ಇನ್ನಿಬ್ಬರು ಮನೆ ಹೊರಗೆ ನಿಲ್ಲುತ್ತಿದ್ದರು. ಕಳ್ಳತನ ಮಾಡಿ ಎಸ್ಕೇಪ್ ಆಗೋವವರೆಗೂ ಕಾನ್ಫರೆನ್ಸ್ ಕಾಲ್ನಲ್ಲಿ ಕೃತ್ಯದ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು.
ಕೃತ್ಯದ ಬಳಿಕ ರಾತ್ರೋರಾತ್ರಿ ಬೆಂಗಳೂರಿನಿಂದ ದೆಹಲಿಗೆ ರೈಲಿನ ಮೂಲಕ ಪರಾರಿಯಾಗುತ್ತಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರಿಂದ ಹನುಮಂತನಗರ ಹಾಗೂ ಕೆಂಪೇಗೌಡ ನಗರ ಠಾಣೆಯ ಎರಡು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.