ಬೆಂಗಳೂರು: ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೋಟೆಲ್ನಲ್ಲಿ ಪಾರ್ಸಲ್ ಸೌಲಭ್ಯ ಮಾತ್ರ ಲಭ್ಯವಿರುತ್ತದೆ ಎಂದು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ತಿಳಿಸಿದರು.
ಭಾನುವಾರದ ಲಾಕ್‌ಡೌನ್: ಹೋಟೆಲ್ನಲ್ಲಿ ಪಾರ್ಸಲ್ ಮಾತ್ರ ಲಭ್ಯ - ಬೆಂಗಳೂರು ಲಾಕ್‌ಡೌನ್
ಮಹಾನಗರದಲ್ಲಿ ಭಾನುವಾರ ನಡೆಯಲಿರುವ ಲಾಕ್‌ಡೌನ್ ವೇಳೆ ಹೋಟೆಲ್‌ಗಳಲ್ಲಿ ಪಾರ್ಸಲ್ ಸೌಲಭ್ಯ ಮಾತ್ರ ಲಭ್ಯ ಇರುತ್ತದೆ.
ಪಿ ಸಿ ರಾವ್
ಹೋಟೆಲ್ ಉದ್ಯಮ ಅಗತ್ಯ ಸೇವೆಗೆ ಬರುವ ಹಿನ್ನೆಲೆಯಲ್ಲಿ ಪಾರ್ಸಲ್ ಸೇವೆಗಳಿಗೆ ಮಾತ್ರ ಅವಕಾಶ ಇದೆ ಹಾಗೂ ಎಂದಿನಂತೆ ಆನ್ ಲೈನ್ ಮೂಲಕವೂ ಆಹಾರವನ್ನು ಆರ್ಡರ್ ಮಾಡಬಹುದು ಅವರು ಹೇಳಿದರು.
ಇಂದು ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ.