ಕರ್ನಾಟಕ

karnataka

ETV Bharat / city

ವೀಕೆಂಡ್, ನೈಟ್ ಕರ್ಫ್ಯೂ ಸಡಿಲಿಸಲು ಹೋಟೆಲ್ ಮಾಲೀಕರ ಸಂಘಗಳಿಂದ ಸರ್ಕಾರಕ್ಕೆ ಗಡುವು - Hotel owners associations deadline to government unleash the Weekend Night Curfew in bangalore

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು ನಾವು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ. ವೀಕೆಂಡ್ ಕರ್ಫ್ಯೂ ವೇಳೆ ಶೇ.50, ನೈಟ್ ಕರ್ಫ್ಯೂ ವೇಳೆ ಹೋಟೆಲ್​ಗಳಿಗೆ ಶೇ.50ರಷ್ಟು ಅವಕಾಶ ಕೊಡಬೇಕೆಂದು ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪಗಳ ಮಾಲೀಕರು, ಬಾರ್, ಪಬ್ ಮಾಲೀಕರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

Hotel owners associations deadline to  government  unleash the Weekend Night Curfew
ವೀಕೆಂಡ್ ನೈಟ್ ಕರ್ಫ್ಯೂ ಸಡಿಲಿಸುವಂತೆ ಸರ್ಕಾರಕ್ಕೆ ಅಂತಿಮ ಗಡುವು ಕೊಟ್ಟ ಹೋಟೆಲ್ ಮಾಲೀಕರ ಸಂಘಟನೆಗಳು

By

Published : Jan 13, 2022, 10:56 PM IST

ಬೆಂಗಳೂರು: ವೀಕೆಂಡ್ ಕರ್ಫ್ಯೂ, ನೈಟ್​​ ಕರ್ಫ್ಯೂ ಹೇರಿರುವುದಕ್ಕೆ ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪಗಳ ಮಾಲೀಕರು, ಬಾರ್, ಪಬ್ ಮಾಲೀಕರ ಸಂಘಗಳಿಂದ ವಿರೋಧ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಕರ್ಫ್ಯೂ ಉಲ್ಲಂಘಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹಾಗೂ ಬೆಂಗಳೂರು ಹೋಟೆಲ್ ಉದ್ದಿಮದಾರರ ಸಂಘದ ಪಿ.ಸಿ.ರಾವ್ ಮತ್ತು ಹಲವು ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ವೀಕೆಂಡ್ ಕರ್ಫ್ಯೂ ವೇಳೆ ಶೇ.50ರಷ್ಟು ಅವಕಾಶ, ನೈಟ್ ಕರ್ಫ್ಯೂ ವೇಳೆ ಹೋಟೆಲ್​ಗಳಿಗೆ ಶೇ.50 ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸರ್ಕಾರಕ್ಕೆ ಒಕ್ಕೂರಲಿನಿಂದ ಒತ್ತಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್​ ಅನ್ನೋದು ಒಂದು ಮೆಡಿಕಲ್​ ಮಾಫಿಯಾ: ಅಗ್ನಿ ಶ್ರೀಧರ್

For All Latest Updates

TAGGED:

ABOUT THE AUTHOR

...view details