ಹೊಸಕೋಟೆ :ಲಾಕ್ಡೌನ್ನಲ್ಲಿ ಜನರು ಹೊರ ಬರದಂತೆ, ಗುಂಪು ಸೇರದಂತೆ ನೋಡಿಕೊಳ್ಳಬೇಕಾದ ಪೊಲೀಸ್ ಅಧಿಕಾರಿಯೇ ಬಿಂದಾಸ್ ಆಗಿ ಬರ್ತ್ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ.
ಓದಿ: ಕಲ್ಲು-ಮಣ್ಣಿನಡಿ ಸಿಲುಕಿದ್ದ ಯವಕನ ರಕ್ಷಿಸಿ ಮಾನವೀಯತೆ ಮೆರೆದ ಉತ್ತರಕಾಶಿ ಪೊಲೀಸರು

ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜು ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಂಡವರು. ಜೂನ್ 1ರಂದು ಇನ್ಸ್ಪೆಕ್ಟರ್ ರಾಜು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಕಳೆದ ವಾರ ಸಬ್ಇನ್ಸ್ಪೆಕ್ಟರ್ರಿಂದ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ಕೊಡಲಾಗಿತ್ತು. ಇದೇ ಖುಷಿಯಲ್ಲಿ ಅವರ ಅಭಿಮಾನಿಗಳು ಬರ್ತ್ಡೇ ದಿನ ಪಟಾಕಿಯನ್ನು ಸಿಡಿಸಿ ಆದ್ದೂರಿಯಾಗಿ ಆಚರಿಸಿದ್ದಾರೆ.
ಹುಟ್ಟುಹಬ್ಬ ಆಚರಣೆಯಲ್ಲಿ ಇನ್ಸ್ಪೆಕ್ಟರ್ ಮತ್ತು ಅವರ ಬೆಂಬಲಿಗರು ಮಾಸ್ಕ್ ಧರಿಸದೇ ಗುಂಪು ಗುಂಪಾಗಿ ನಿಂತುಕೊಂಡು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಈ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ಗೆ ಎಸ್‌ಪಿ ರವಿಚೆನ್ನಣ್ಣನವರ್ ವರದಿ ನೀಡಿದ್ದಾರೆ.