ಹೊಸಕೋಟೆ:ನಾಳೆ ಮತದಾನದ ದಿನವಾಗಿದ್ದುಹೈವೋಲ್ಟೇಜ್ ಕ್ಷೇತ್ರವೆನಿಸಿರುವ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಿವೆ.
ಉಪ ಚುನಾವಣಾ ಮತದಾನ ನಾಳೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ, ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಹಾಗೂ 1000 ಕ್ಕೂ ಹೆಚ್ಚು ಹೋಮ್ ಗಾರ್ಡ್ಗಳ ನಿಯೋಜನೆ ಮಾಡಲಾಗಿದೆ. ಅದರಲ್ಲಿ 5 ಜನ ಡಿವೈಎಸ್ಪಿಗಳು, 10 ಜನ ವೃತ್ತ ನಿರೀಕ್ಷರು ಪ್ಯಾರಾ ಮಿಲಿಟರಿ, 4 ಡಿಆರ್ ಮತ್ತು 4 ಕೆಎಸ್ಆರ್ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಹೊಸಕೋಟೆ ಉಪಚುನಾವಣಾ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್ ಜತೆಗೆ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿರೋ ಎಸ್‌ಪಿ ಯಾವುದೇ ರೀತಿ ಶಾಂತಿಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಜನರಲ್ಲಿ ಯಾವುದೇ ರೀತಿ ಭಯದ ವಾತಾವರಣ ಇರಬಾರದೆಂದು ಪೊಲೀಸ್ ಪಡೆಗಳು ಹೊಸಕೋಟೆ ನಗರದಾದ್ಯಂತ ಪಥಸಂಚಲನ ನಡೆಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರನ್ನ ಮುಲಾಜೀಲ್ಲದೆ ಕೇಸ್ ಮಾಡಬೇಕಾಗುತ್ತದೆ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ.