ಕರ್ನಾಟಕ

karnataka

ETV Bharat / city

ರೇಖಾ ಕದಿರೇಶ್ ಕೊಲೆ ಪ್ರಕರಣದ ಕಾರಣ ಆದಷ್ಟು ಶೀಘ್ರ ಬಹಿರಂಗ: ಬೊಮ್ಮಾಯಿ - bengaluru murder case latest updates

ಕೊಲೆ ನಡೆದಿರುವುದರ ಹಿಂದೆ ಕೌಟುಂಬಿಕ ಕಾರಣವಿದೆಯೋ?, ರಾಜಕೀಯ ಕಾರಣವಿದೆಯೋ? ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

home-minister-basavaraja-bommai-on-rekha-kadiresh-murder-case
ರೇಖಾ ಕದಿರೇಶ್ ಕೊಲೆ ಪ್ರಕರಣದ ಕಾರಣ ಆದಷ್ಟು ಶೀಘ್ರ ಬಹಿರಂಗ; ಬೊಮ್ಮಾಯಿ ವಿಶ್ವಾಸ

By

Published : Jun 25, 2021, 11:57 AM IST

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ಅತಿ ಶೀಘ್ರದಲ್ಲಿಯೇ ಬೆಳಕಿಗೆ ಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಖಾ ಕದಿರೇಶ್ ಕೊಲೆ ಪ್ರಕರಣದ ಹಿಂದೆ ಹಲವಾರು ಆಯಾಮದ ಹಿನ್ನೆಲೆಯಿದೆ. ನಡೆದ ಘಟನೆ ಆಧಾರದಲ್ಲಿ ನಿನ್ನೆ ನಡೆಸಿದ ತನಿಖೆಯಲ್ಲಿ ಸಾಕಷ್ಟು ವಿಷಯ ಗೊತ್ತಾಗಿದೆ. ಆರೋಪಿಗಳ ಮಾಹಿತಿ ತಿಳಿಯಲ್ಪಟ್ಟಿದೆ, ಸತ್ಯ ಆದಷ್ಟು ಬೇಗ ಹೊರಬಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಈ ಕೊಲೆ ಪ್ರಕರಣದ ಹಿಂದೆ ಹಿಂದೆ ಯಾರಿದ್ದಾರೆ ಎನ್ನುವ ಬಹುತೇಕ ಮಾಹಿತಿಯೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಲೆ ನಡೆದಿರುವುದರ ಹಿಂದೆ ಕೌಟುಂಬಿಕ ಕಾರಣವಿದೆಯೋ?, ರಾಜಕೀಯ ಕಾರಣವಿದೆಯೋ? ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಲಿದೆ. ಶೀಘ್ರದಲ್ಲೇ ಸತ್ಯ ಹೊರಬರಲಿದೆ ಬೊಮ್ಮಾಯಿ ಮಾಹಿತಿ ನೀಡಿದರು.

ಇದನ್ನೂ ಓದಿ:7 ಬಾರಿ ಗರ್ಭಪಾತ.. ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಗೆ ವಿಷವುಣಿಸಿದ ಪ್ರಿಯಕರ

ABOUT THE AUTHOR

...view details