ಕರ್ನಾಟಕ

karnataka

ETV Bharat / city

ಲಾಕ್​​ಡೌನ್ ಸಿದ್ಧತೆ ಮಾಡಿಕೊಳ್ಳಲಾಗಿದೆ ; ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ : ಗೃಹ ಸಚಿವ - ಒಂದು ವಾರ ಲಾಕ್​​ಡೌನ್​​

ಒಂದು ವಾರದ ಲಾಕ್​​​ಡೌನ್ ಮೊದಲ ಲಾಕ್​​​​ಡೌನ್-1 ರೀತಿ ಇರಲಿದೆ. ಬಿಗಿ ಬಂದೋಬಸ್ತ್, ಹೆಚ್ಚಿನ ನಿಗಾವಹಿಸಲು ಸೂಚಿಸಿದ್ದೇವೆ. ಸೀಲ್​​​ಡೌನ್ ಪ್ರದೇಶವನ್ನು ಸಂಪೂರ್ಣ ಬಂದ್ ಮಾಡುತ್ತೇವೆ. ದಿನಸಿ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ಮಾತ್ರ ತೆರೆದಿರುತ್ತವೆ..

Home Minister Basavaraj Bommai
ಗೃಹ ಸಚಿವ ಬಸವರಾಜ್​ ಬೊಮ್ಮಾಯಿ

By

Published : Jul 14, 2020, 5:50 PM IST

ಬೆಂಗಳೂರು :ಲಾಕ್​​​​​ಡೌನ್ ಕೇಳಿದ ಜಿಲ್ಲೆಗಳಿಗೆ ಅನುಮತಿ ನೀಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಆಯಾ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್​​​​ ಬೊಮ್ಮಾಯಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮಾಂತರವನ್ನು ರಾಜ್ಯ ಸರ್ಕಾರವೇ ಒಂದು ವಾರ ಲಾಕ್​​​​ಡೌನ್ ಮಾಡಿದೆ. ಧಾರವಾಡ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಲಾಕ್​​​ಡೌನ್​​​​ಗೆ ಅನುಮತಿ ಕೇಳಿದ್ದು, ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಒಂದು ವಾರದ ಲಾಕ್​​​ಡೌನ್ ಮೊದಲ ಲಾಕ್​​​​ಡೌನ್-1 ರೀತಿ ಇರಲಿದೆ. ಬಿಗಿ ಬಂದೋಬಸ್ತ್, ಹೆಚ್ಚಿನ ನಿಗಾವಹಿಸಲು ಸೂಚಿಸಿದ್ದೇವೆ. ಸೀಲ್​​​ಡೌನ್ ಪ್ರದೇಶವನ್ನು ಸಂಪೂರ್ಣ ಬಂದ್ ಮಾಡುತ್ತೇವೆ. ದಿನಸಿ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ಮಾತ್ರ ತೆರೆದಿರುತ್ತವೆ ಎಂದರು.

ಲಾಕ್​​​ಡೌನ್​​ಗೆ ಕೆಲವು ಜಿಲ್ಲೆಗಳು ಮಾತ್ರ ಕೇಳಿದ್ದವು. ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಜಿಲ್ಲೆಗಳ ಗಡಿ ಭಾಗಗಳನ್ನು ಮಾಡಲು ಅನುಮತಿ ಕೇಳಿದ್ದು, ಅದಕ್ಕೆ ಅವಕಾಶ ಕಲ್ಪಿಸಿದ್ದೇನೆ. ಅಗತ್ಯ ಸೇವೆಗಳ ಸಂಚಾರಕ್ಕೆ ಮಾತ್ರ ಗಡಿ ಪ್ರವೇಶಕ್ಕೆ ಸೂಚಿಸಿದ್ದೇವೆ, ಗಡಿಗಳನ್ನು ಬಂದ್ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ವೈದ್ಯಕೀಯ ಕ್ಷೇತ್ರದ ಕಂಪನಿಗಳು, ರಫ್ತು ಮಾಡುವ ಮುಖ್ಯ ಕಾರ್ಖಾನೆಗಳು, ಆಹಾರ ಸಂಸ್ಕರಣಾ ಘಟಕಗಳು ಸೇರಿ ಕೆಲವಕ್ಕೆ ವಿನಾಯಿತಿ ನೀಡಲಾಗಿದೆ. ಅವು ಲಾಕ್​​​ಡೌನ್ ಅವಧಿಯಲ್ಲೂ ಕಾರ್ಯಾರಂಭ ನಡೆಸಲಿವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details