ಕರ್ನಾಟಕ

karnataka

ETV Bharat / city

ಪುನೀತ್ ಅಂತ್ಯಸಂಸ್ಕಾರ ಸಿದ್ಧತೆ ಹಿನ್ನೆಲೆ ಸ್ಥಳ ಪರಿಶೀಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ - Puneeth Rajkumar funeral preparation

ಪುನೀತ್ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ಈ ಹಿನ್ನೆೆಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿರುವ ಪ್ರದೇಶಕ್ಕೆ ಗೃಹ ಸಚಿವರು ನಗರ ಪೊಲೀಸ್ ಆಯುಕ್ತರೊಂದಿಗೆ ತೆರಳಿ ಪರಿಶೀಲಿಸಿದರು..

Araga Jnanendra checks on Puneeth Rajkumar funeral preparation
ಪುನೀತ್ ಅಂತ್ಯಸಂಸ್ಕಾರ ಸಿದ್ಧತೆ ಹಿನ್ನೆಲೆ ಗೃಹ ಸಚಿವರಿಂದ ಸ್ಥಳ ಪರಿಶೀಲನೆ

By

Published : Oct 30, 2021, 5:17 PM IST

ಬೆಂಗಳೂರು :ನಟ ಪುನೀತ್ ರಾಜ್​​​ಕುಮಾರ್ ಅಂತ್ಯಸಂಸ್ಕಾರಕ್ಕೆ ನಗರದ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆ ಇಂದು ಮಧ್ಯಾಹ್ನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪುನೀತ್ ಅಂತ್ಯಸಂಸ್ಕಾರ ಸಿದ್ಧತೆ ಹಿನ್ನೆಲೆ ಗೃಹ ಸಚಿವರಿಂದ ಸ್ಥಳ ಪರಿಶೀಲನೆ

ಪುನೀತ್ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ಈ ಹಿನ್ನೆೆಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿರುವ ಪ್ರದೇಶಕ್ಕೆ ಗೃಹ ಸಚಿವರು ನಗರ ಪೊಲೀಸ್ ಆಯುಕ್ತರೊಂದಿಗೆ ತೆರಳಿ ಪರಿಶೀಲಿಸಿದರು.

ಅಪ್ಪು ಅಂತ್ಯಸಂಸ್ಕಾರ ನಾಳೆ ಡಾ. ರಾಜ್​​ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ನೆರವೇರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಇಂದು ಬೆಳಗ್ಗೆಯಿಂದ ಸಿದ್ಧತೆಗಳು ನಡೆಯುತ್ತಿವೆ. ಹಲವು ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ

ABOUT THE AUTHOR

...view details