ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಉಪವಾಸ ಇದೇ ತಿಂಗಳ 24ರಿಂದ ಆರಂಭ ಹಿನ್ನೆಲೆ ಮುಸ್ಲಿಂ ಸಮುದಾಯದವರಿಗೆ ಇಸ್ಲಾಂ ಧಾರ್ಮಿಕ ಸಂಸ್ಥೆ ಇಮಾರತ್ - ಎ - ಷರಿಯಾ ಹಲವು ನಿಯಮಗಳನ್ನು ಪ್ರಕಟಿಸಿದೆ.
ಏ. 24ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಸ್ಲಾಂ ಧಾರ್ಮಿಕ ಸಂಸ್ಥೆಯಿಂದ ಹಲವು ನಿಯಮ!
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಇದೇ ತಿಂಗಳ 24ರಿಂದ ಉಪವಾಸ ಆರಂಭ ಹಿನ್ನೆಲೆ ಮುಸ್ಲಿಂ ಸಮುದಾಯದವರಿಗೆ ಇಸ್ಲಾಂ ಧಾರ್ಮಿಕ ಸಂಸ್ಥೆ ಇಮಾರತ್ - ಎ - ಷರಿಯಾ ಹಲವು ನಿಯಮಗಳನ್ನು ಪ್ರಕಟಿಸಿದೆ.
ಏಪ್ರಿಲ್ 24 ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಸ್ಲಾಂ ಧಾರ್ಮಿಕ ಸಂಸ್ಥೆಯಿಂದ ಹಲವು ನಿಯಮ...!
ಯಾವುದೇ ಇಫ್ತಾರ್ ಕೂಟ ಆಯೋಜಿಸಬೇಡಿ. ಸಾಮಾಜಿಕ ಅಂತರ ಸೇರಿದಂತೆ ಸರ್ಕಾರದ ಎಲ್ಲಾ ನಿಯಮ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸೂಚಿಸಿದೆ. ಮುಸ್ಲಿಮರು, ಮುಸ್ಲಿರೇತರರಿಗೆ ನೆರವಾಗಿ, ದಾನ-ಧರ್ಮ ಮಾಡುವಂತೆ ಮನವಿ ಮಾಡಿದೆ. ಪ್ರತಿದಿನ ಬೆಳಗ್ಗೆ ಉಪವಾಸದ ಸಮಯಕ್ಕೆ ಲೌಡ್ ಸ್ಪೀಕರ್ಗಳ ಮೂಲಕ ಎಬ್ಬಿಸುವ ವ್ಯವಸ್ಥೆ ನಿಲ್ಲಿಸುವಂತೆಯೂ ಹೇಳಿದೆ. ಇನ್ನು ಮುಸ್ಲಿಂ ಯುವಕರು ಮುಂಜಾನೆ ಅಥವಾ ರಾತ್ರಿ ವೇಳೆ ಬೈಕ್ಗಳಲ್ಲಿ ಅಡ್ಡಾಡಬೇಡಿ ಅಂತ ಕೂಡ ಹೇಳಿದೆ.