ಕರ್ನಾಟಕ

karnataka

ETV Bharat / city

ಕರ್ನಾಟಕ ಬಜೆಟ್ ಇತಿಹಾಸ: 21 ಕೋಟಿಯಿಂದ ಈವರೆಗಿನ ರಾಜ್ಯ ಬಜೆಟ್ ಗಾತ್ರದ ಸ್ವಾರಸ್ಯಕರ ಅಂಕಿ-ಅಂಶ ಹೀಗಿದೆ.. - ಕರ್ನಾಟಕ ಬಜೆಟ್ ಗಾತ್ರದ ಇತಿಹಾಸ

ಒಂದನೇ ವಿಧಾನಸಭೆಯಿಂದ ಪ್ರಸಕ್ತ ವಿಧಾನಸಭೆವರೆಗಿನ ನಮ್ಮ ರಾಜ್ಯದ ಬಜೆಟ್ ಗಾತ್ರದ ಇತಿಹಾಸ ಹೇಗಿದೆ ಎಂಬ ಸ್ವಾರಸ್ಯಕರ ವರದಿ ಇಲ್ಲಿದೆ.

History of Karnataka Budget
ಕರ್ನಾಟಕ ಬಜೆಟ್

By

Published : Feb 28, 2022, 8:13 AM IST

Updated : Feb 28, 2022, 8:19 AM IST

ಬೆಂಗಳೂರು: ಬಜೆಟ್ ಅಂದ್ರೆ ಸಾಕು ಎಲ್ಲರಲ್ಲೂ ಆಶಾಭಾವನೆ, ಕುತೂಹಲ. ಸಂಗ್ರಹಿಸಿದ ಆದಾಯವನ್ನು ಆಡಳಿತ ನಿರ್ವಹಣೆ ಮತ್ತು ಸಾಮಾಜಿಕ ಜವಾಬ್ದಾರಿಗಾಗಿ ಸಮರ್ಪಕವಾಗಿ ವಿನಿಯೋಗಿಸಲು ಸರ್ಕಾರಗಳು ಮುಂಗಡ ಪತ್ರವನ್ನು ಮಂಡಿಸುತ್ತವೆ.

ಅಂತೆಯೇ ಈಗ ಚೊಚ್ಚಲ ಬಜೆಟ್ ಮಂಡಿಸಲು ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ. ಹಾಗಾದ್ರೆ ಒಂದನೇ ವಿಧಾನಸಭೆಯಿಂದ ಪ್ರಸಕ್ತ ವಿಧಾನಸಭೆವರೆಗಿನ ನಮ್ಮ ರಾಜ್ಯದ ಬಜೆಟ್ ಗಾತ್ರದ ಇತಿಹಾಸ ಹೇಗಿದೆ ಎಂಬ ಸ್ವಾರಸ್ಯಕರ ವರದಿ ಇಲ್ಲಿದೆ.

ಬಜೆಟ್. ಮುಂಗಡ ಪತ್ರ. ಆಯವ್ಯಯ. ಬಜೆಟ್‌ ಎನ್ನುವುದು ಸರ್ಕಾರದ ಬ್ಯಾಲೆನ್ಸ್‌ಶೀಟ್‌ ಇದ್ದಂತೆ. ಮುಂದಿನ ಒಂದು ಆರ್ಥಿಕ ವರ್ಷದಲ್ಲಿ ಆಗಬೇಕಾದ ಕೆಲಸಗಳು, ಯೋಜನೆಗಳು ಹಾಗೂ ಅನುದಾನದ ವಿಂಗಡಣೆಯನ್ನು ಮಾಡಲು ಸರ್ಕಾರ ಬಜೆಟ್‌ ಹೊಂದಿರಬೇಕಾಗುತ್ತದೆ. ಪ್ರಮುಖವಾಗಿ ಸಂಪನ್ಮೂಲಗಳ ಹಂಚಿಕೆ ಮಾಡಲು ಮುಂಗಡ ಪತ್ರ ಬೇಕಾಗುತ್ತದೆ. ಹಾಗೂ ಬೆಲೆಯ ನಿಯಂತ್ರಣಕ್ಕಾಗಿ, ತೆರಿಗೆಯ ನಿರ್ಧಾರಕ್ಕಾಗಿ ಹಾಗೂ ಆರ್ಥಿಕ ಅಸಮಾನತೆಯನ್ನು ನೀಗಿಸಲು ಬಜೆಟ್‌ ಪ್ರಮುಖವಾಗಿದೆ.

ಮಾರ್ಚ್ 4 ರಂದು ಸಿಎಂ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಮಂಡನೆ. ಇತ್ತೀಚಿನ ವರ್ಷಗಳಲ್ಲಿ ಮಂಡಿಸಲಾಗುವ ಬಜೆಟ್​​ನ ಗಾತ್ರವೇ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ. ದೊಡ್ಡ ಗಾತ್ರದ ಬಜೆಟ್ ಮಂಡಿಸುವ ಮೂಲಕ ಆಯಾ ಸರ್ಕಾರಗಳು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈವರೆಗೆ ಮಂಡನೆಯಾದ ಬಜೆಟ್​​ಗಳ ಗಾತ್ರದ ಬಗ್ಗೆ ಸ್ವಾರಸ್ಯಕರ ಮಾಹಿತಿಯತ್ತ ಸಮಗ್ರ ನೋಟ ಇಲ್ಲಿದೆ.

21 ಕೋಟಿಯಿಂದ ಎರಡೂವರೆ ಲಕ್ಷ ಕೋಟಿ ವರೆಗಿನ ಬಜೆಟ್ ಯಾನ:

  • ಕರ್ನಾಟಕ ಮೊದಲ ವಿಧಾನಸಭೆ ಪ್ರಾರಂಭವಾದ ಮೇಲೆ 1952-53 ರಲ್ಲಿ ಸಿಎಂ ಆಗಿದ್ದ ಕೆಂಗಲ್ ಹನುಮಂತಯ್ಯನವರು ರಾಜ್ಯದ ಪ್ರಥಮ ಬಜೆಟ್ ಮಂಡಿಸಿದರು. ಅಂದು ಅವರು 21.03 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು.
  • 2ನೇ ವಿಧಾನಸಭೆ: 1957-1962ರಲ್ಲಿ ರಾಜ್ಯದ ಬಜೆಟ್ ಗಾತ್ರ 73.91 ಕೋಟಿ ರೂ.ಗೆ ತಲುಪಿತ್ತು.
  • 1962-67ರ ವರೆಗಿನ 3ನೇ ವಿಧಾನಸಭೆಯಲ್ಲಿ ರಾಜ್ಯದ ಬಜೆಟ್ ಗಾತ್ರ 154 ಕೋಟಿ ರೂ.ಗೆ ತಲುಪಿತು.
  • 1967-71 - 4ನೇ ವಿಧಾನಸಭೆಯಲ್ಲಿ ರಾಜ್ಯದ ಆಯವ್ಯಯ ಗಾತ್ರ 275.94 ಕೋಟಿ ರೂ.
  • 1972-77 - 5ನೇ ವಿಧಾನಸಭೆಯಲ್ಲಿ ರಾಜ್ಯದ ಮುಂಗಡಪತ್ರದ ಗಾತ್ರ 570.78 ಕೋಟಿ ರೂ.
  • 1978-83 - 6ನೇ ವಿಧಾನಸಭೆಯಲ್ಲಿ 1250.75 ಕೋಟಿ ರೂ.ಗೆ ತಲುಪಿದ ಬಜೆಟ್.
  • 1983-85 - 7ನೇ ವಿಧಾನಸಭೆ ಅವಧಿಯಲ್ಲಿ ಬಜೆಟ್ ಗಾತ್ರ 2078.45 ಕೋಟಿ ರೂ.
  • 1985-89 - 8ನೇ ವಿಧಾನಸಭೆ ಅವಧಿಯಲ್ಲಿ 3106.33 ಕೋಟಿ ರೂ. ಬಜೆಟ್.
  • 1989-94 - 9ನೇ ವಿಧಾನಸಭೆ ಅವಧಿಯಲ್ಲಿ 6588.45 ಕೋಟಿ ರೂ. ಆಯವ್ಯಯ
  • 1994-99 - 10ನೇ ವಿಧಾನಸಭೆ ಅವಧಿಯಲ್ಲಿ 15,579.74 ಕೋಟಿ ರೂ. ಬಜೆಟ್
  • 1999-2004 - 11ನೇ ವಿಧಾನಸಭೆ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ 30,285.48 ಕೋಟಿ ರೂ.
  • 2004-2007 - 12ನೇ ವಿಧಾನಸಭೆ ಅವಧಿಯಲ್ಲಿ 47,950.34 ಕೋಟಿ ರೂ. ಬಜೆಟ್
  • 2008-2013 - 13ನೇ ವಿಧಾನಸಭೆ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಲಕ್ಷದ ಗಡಿ ದಾಟಿ 1,17,005 ಕೋಟಿ ರೂ. ಗೆ ತಲುಪಿತು.
  • 2013-2018 - 14ನೇ ವಿಧಾನಸಭೆ ಅವಧಿಯಲ್ಲಿ 2,02,297 ಕೋಟಿ ರೂ. ಬಜೆಟ್
  • 2018ರಿಂದ ಪ್ರಾರಂಭವಾಗಿರುವ ಪ್ರಸಕ್ತ 15ನೇ ವಿಧಾನಸಭೆಯಲ್ಲಿ 2020-21ನೇ ಸಾಲಿನಲ್ಲಿ ಮಂಡಿಸಿದ ಬಜೆಟ್​ನ ಗಾತ್ರ 2,46,207 ಕೋಟಿ ರೂಗೆ ತಲುಪಿದೆ.
Last Updated : Feb 28, 2022, 8:19 AM IST

ABOUT THE AUTHOR

...view details