ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ದೇವನಹಳ್ಳಿ ಐತಿಹಾಸಿಕ ಕೋಟೆಯ (Historical Devanahalli monument fort) ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ.
ಕೆಲವು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಇಂದು ಮುಂಜಾನೆ ದೇವನಹಳ್ಳಿ ಕೋಟೆಯ ಬುರುಜು ಸಂಪೂರ್ಣ ಕುಸಿದಿದೆ. ನಿನ್ನೆ(ಗುರುವಾರ) ಸಹ ಕೋಟೆಯ ರಕ್ಷಣೆಗೆಂದು ಕಟ್ಟಲಾಗಿದ ರಕ್ಷಣಾ ಗೋಡೆ ಕುಸಿದು ಬಿದ್ದಿತ್ತು. ಇಂದು(ಶುಕ್ರವಾರ) ಕೋಟೆಯ ಬುರುಜು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕ್ರಿ.ಶ. 1501ರಲ್ಲಿ ಆವತಿ ಪಾಳೇಗಾರರಾದ ಮಲ್ಲಭೈರೇಗೌಡ ಮಣ್ಣಿನ ಕೋಟೆಯನ್ನ ಕಟ್ಟಿದ್ದರು. ನಂತರ 1747ರಲ್ಲಿ ಮೈಸೂರು ಸಾಮ್ರಾಜ್ಯದ ಅಧೀನಕ್ಕೆ ದೇವನಹಳ್ಳಿ ಕೋಟೆ ಒಳಪಟ್ಟಿತ್ತು. ಆಗ ಹೈದರಾಲಿ ಕಲ್ಲಿನ ಕೋಟೆಯನ್ನಾಗಿ ಭಧ್ರಪಡಿಸಿದ್ದ ಎಂಬುದು ಇತಿಹಾಸ.