ಕರ್ನಾಟಕ

karnataka

ETV Bharat / city

ಹಿಜಾಬ್-ಕೇಸರಿ ಶಾಲು ವಿವಾದ : ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ ಅಪಾಯಕಾರಿ ಎಂದ ಕರ್ನಾಟಕ ಬಿಜೆಪಿ - ಕರ್ನಾಟಕ ಹಿಜಾಬ್ ವಿವಾದ

ಇದಕ್ಕೆ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ, "ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..

Hijab row in Karnataka
ರಾಹುಲ್ ಗಾಂಧಿ ಟ್ವೀಟ್​ಗೆ ಕರ್ನಾಟಕ ಬಿಜೆಪಿ ಪ್ರತಿಕ್ರಿಯೆ

By

Published : Feb 5, 2022, 3:03 PM IST

ಬೆಂಗಳೂರು: ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ರಾಜ್ಯ ನಾಯಕರು ಮಾತ್ರವಲ್ಲದೇ ರಾಷ್ಟ್ರ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿವಾದದ ಕುರಿತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿ ತಿರುಗೇಟು ನೀಡಿದ್ದು, "ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ ಅಪಾಯಕಾರಿ" ಎಂದು ಹೇಳಿದೆ.

"ಹಿಜಾಬ್​​ನಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದ್ದು, ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ, ಆಕೆ ಯಾರಿಗೂ ಭೇದ ಭಾವ ಮಾಡುವುದಿಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ಹಿಜಾಬ್​ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್​ ಗಾಂಧಿ!

ಇದಕ್ಕೆ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ, "ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಶಿಕ್ಷಣ ಪಡೆಯಲು ಹಿಜಾಬ್ ಅತ್ಯಗತ್ಯವಾಗಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸುವುದಿಲ್ಲ? ಎಂದು ಪ್ರಶ್ನೆ ಮಾಡಿದೆ.

ABOUT THE AUTHOR

...view details