ಕರ್ನಾಟಕ

karnataka

ಬೊಮ್ಮಾಯಿ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಸಿಕ್ಕಿದ್ದೇನು? ಪ್ರಮುಖಾಂಶಗಳು ಹೀಗಿವೆ..

By

Published : Mar 4, 2022, 5:41 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ವಿಧಾನಸಭೆಯಲ್ಲಿ 2022– 23ನೇ ಸಾಲಿನ ಬಜೆಟ್ ಮಂಡಿಸಿದರು.

basavaraja
ಬಜೆಟ್

ಸಿಎಂ ಬೊಮ್ಮಾಯಿ ಮಂಡಿಸಿದ ಮೊದಲ ಬಜೆಟ್ ಅನ್ನು 'ಪ್ರಗತಿಯ ಮುನ್ನೋಟ'ವೆಂದೇ ಬಿಂಬಿಸಲಾಗಿದೆ. ತಮ್ಮ ಚೊಚ್ಚಲ ಬಜೆಟ್ ಮೂಲಕ ಅವರು ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

  • ಮೇಕೆದಾಟು ಯೋಜನೆಗೆ ₹1,000 ಕೋಟಿ ಅನುದಾನ
  • ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹20 ಕೋಟಿ ಅನುದಾನ
  • ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಘೋಷಣೆ
  • ರಾಜ್ಯ ಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ನಡೆಸಲು ಅಸ್ತು
  • ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ ₹56,710 ಕೋಟಿ ಅನುದಾನ
  • ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳಲ್ಲಿ 438 'ನಮ್ಮ ಕ್ಲಿನಿಕ್​​'ಗಳ ಸ್ಥಾಪನೆ
  • ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ
  • ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ: ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ
  • ‘ರೈತ ಶಕ್ತಿ’ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ ₹250ರಂತೆ ಡೀಸೆಲ್ ಸಹಾಯಧನ: ₹600 ಕೋಟಿ ಅನುದಾನ
  • ಮಕ್ಕಳ ಅಭ್ಯುದಯಕ್ಕೆ ₹40,944 ಕೋಟಿ ಘೋಷಣೆ
  • ಮಹಿಳೆಯರ ಅಭಿವೃದ್ಧಿಗೆ ₹43,188 ಕೋಟಿ ಘೋಷಣೆ
  • ರಾಜ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಹೆಚ್ಚಳ
  • ಕೃಷಿ ಕ್ಷೇತ್ರಕ್ಕೆ ₹33,700 ಕೋಟಿ ಘೋಷಣೆ
  • ಬೆಂಗಳೂರು ಅಭಿವೃದ್ಧಿಗೆ ₹8,409 ಕೋಟಿ ಕೊಡುಗೆ
  • 2022–23ನೇ ಸಾಲಿನ ಬಜೆಟ್ ಗಾತ್ರ ₹2,65,720 ಕೋಟಿ

ABOUT THE AUTHOR

...view details