ಬೆಂಗಳೂರು: ವೈಯಾಲಿಕಾವಲ್ ಸೊಸೈಟಿಯ 55 ನಿವೇಶನದಾರರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ಸೊಸೈಟಿ ನಾಗರಿಕ ಸೌಲಭ್ಯ ನಿವೇಶನಗಳಲ್ಲಿನ ಸೈಟ್ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದೆ.
ನಿವೇಶನದಾರರಾದ ವಿ.ಆರ್ ಪದ್ಮಾವತಿ ಸೇರಿದಂತೆ 53 ಮಂದಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ಈ ಮಧ್ಯಂತರ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೇಔಟ್ ಪ್ಲಾನ್ನಂತೆ ಸೈಟ್ ಖರೀದಿ ಮಾಡಲಾಗಿದೆ. ಆ ಬಳಿಕ ಸೊಸೈಟಿ ಮತ್ತು ಬಿಡಿಎ ಸೇರಿ ಬಡಾವಣೆಯ ಪ್ಲಾನ್ ಬದಲಿಸಿವೆ. ಇದರಲ್ಲಿ ನಿವೇಶನದಾರರ ತಪ್ಪಿಲ್ಲ. ಆದರೂ, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.