ಕರ್ನಾಟಕ

karnataka

ETV Bharat / city

ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲು ಗೊಂದಲ: ಅರ್ಜಿಯು ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದ ಹೈಕೋರ್ಟ್ - ಹೈಕೋರ್ಟ್ ವಿಚಾರಣೆ

'ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್' ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟನೆ ನೀಡಿದೆ.

hc
hc

By

Published : Jul 21, 2021, 11:29 PM IST

ಬೆಂಗಳೂರು: ರಾಜ್ಯದ ಸಿವಿಲ್ ನ್ಯಾಯಾಧೀಶರ 94 ಹುದ್ದೆಗಳ ಭರ್ತಿಗೆ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ದೃಷ್ಟಿಹೀನರು ಮತ್ತು ಕಡಿಮೆ ದೃಷ್ಟಿ ಉಳ್ಳವರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ಅಂತಿಮ ಫಲಿತಾಂಶಕ್ಕೆ ಒಳಪಡಲಿದೆ ಎಂದು ಹೈಕೋರ್ಟ್ ತಿಳಿಸಿದೆ.

ಈ ಕುರಿತು 'ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್' ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸ್ಪಷ್ಟನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಜಯ್ನಾ ಕೊಠಾರಿ ವಾದಿಸಿ, ಆಗಸ್ಟ್ 8ಕ್ಕೆ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ನಾವು ಕೋರುತ್ತಿಲ್ಲ. ಆದರೆ, ಪೂರ್ವಭಾವಿ ಪರೀಕ್ಷೆಗೆ ಇನ್ನೆರಡು ವಾರ ಇರುವುದರಿಂದ ದೃಷ್ಟಿಹೀನರು ಮತ್ತು ಕಡಿಮೆ ದೃಷ್ಟಿ ಉಳ್ಳವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ನೇಮಕಾತಿ ಸಮಿತಿ ಪರ ವಕೀಲರು ವಾದಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಅಷ್ಟಕ್ಕೂ ಮುಂದೆಯೂ ನೇಮಕಾತಿಗಳು ನಡೆಯುತ್ತವೆ. ಆಗ ಅರ್ಜಿದಾರರ ಮನವಿ ಪರಿಗಣಿಸಬಹುದು ಎಂದರು. ವಾದ ಆಲಿಸಿದ ಪೀಠ, ನೇಮಕಾತಿ ಪ್ರಕ್ರಿಯೆಯು ಅರ್ಜಿಯ ಅಂತಿಮ ಫಲಿತಾಂಶಕ್ಕೆ ಒಳಪಡಲಿದೆ ಎಂದು ತಿಳಿಸಿತು. ಹಾಗೆಯೇ, ಆಕ್ಷೇಪಣೆ ಸಲ್ಲಿಸಲು ನೇಮಕಾತಿ ಸಮಿತಿ ಪರ ವಕೀಲರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details