ಕರ್ನಾಟಕ

karnataka

ETV Bharat / city

ವಿಧಾನಸೌಧದಲ್ಲಿ ಥರ್ಮೋಗ್ರಫಿ ಹೈಟೆಕ್ ಸ್ಕ್ಯಾನಿಂಗ್ ಯಂತ್ರ.. ಏನಿದರ ವಿಶೇಷತೆ?

ಇದು ಯಶಸ್ವಿಯಾದ್ರೆ ಸರ್ಕಾರಿ ಇಲಾಖೆಯ ಎಲ್ಲ ಕಚೇರಿಗಳಲ್ಲೂ ಯಂತ್ರ ಬಳಸುವ ಚಿಂತನೆ ಸರ್ಕಾರದ ಮುಂದಿದೆ. ಹಾಗಾಗಿಯೇ ವಿಧಾನಸೌಧದ ಒಂದು ಕಡೆ ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಳಸಲಾಗುತ್ತಿದೆ..

High-tech scanning of thermography
ಥರ್ಮೋಗ್ರಫಿ ಹೈಟೆಕ್ ಸ್ಕ್ಯಾನಿಂಗ್ ಯಂತ್ರ

By

Published : Jul 29, 2020, 7:07 PM IST

ಬೆಂಗಳೂರು:ವಿಧಾನಸೌಧದ ಅಧಿಕಾರಿ ಮತ್ತು ಸಿಬ್ಬಂದಿಯನ್ನ ತಪಾಸಣೆಗೊಳಪಡಿಸಲು 'ಸೇಫ್ ಪ್ರೋ' ಎಂಬ ಥರ್ಮೋಗ್ರಫಿ ಹೈಟೆಕ್ ಸ್ಕ್ಯಾನಿಂಗ್ ಯಂತ್ರದ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಪ್ರಾಯೋಗಿಕವಾಗಿ ಈ ಯಂತ್ರ ಇರಿಸಲಾಗಿದೆ‌. ಅದು ಹೇಗೆ ಕೆಲಸ ಮಾಡುತ್ತದೆ.

ವಿಶೇಷತೆ ಏನು?: ಮಾಸ್ಕ್ ಧರಿಸಿಯೇ ಯಂತ್ರದ ಮುಂದೆ ನಿಲ್ಲಬೇಕು. ಒಂದು ವೇಳೆ ಮಾಸ್ಕ್ ಧರಿಸದೆ ನಿಂತರೆ ಮಾಸ್ಕ್ ಧರಿಸಿಲ್ಲವೆಂದು ಹೇಳುತ್ತದೆ. ಜೊತೆಗೆ 1.5 ಮೀಟರ್​​​ನಲ್ಲೇ ಥರ್ಮೋಗ್ರಫಿ ಸ್ಕ್ಯಾನಿಂಗ್ ಮಾಡಿ, ಒಂದೇ ಬಾರಿ 20 ಜನರ ದೇಹದ ತಾಪಮಾನ ಹೇಳುತ್ತದೆ. ಇಬ್ಬರು ಮಾಡುವ ಕೆಲಸ ಈ ಯಂತ್ರ ಒಂದೇ ಮಾಡುತ್ತದೆ.

ಥರ್ಮೋಗ್ರಫಿ ಹೈಟೆಕ್ ಸ್ಕ್ಯಾನಿಂಗ್ ಯಂತ್ರ ಅಳವಡಿಕೆ

ಇದು ಯಶಸ್ವಿಯಾದ್ರೆ ಸರ್ಕಾರಿ ಇಲಾಖೆಯ ಎಲ್ಲ ಕಚೇರಿಗಳಲ್ಲೂ ಯಂತ್ರ ಬಳಸುವ ಚಿಂತನೆ ಸರ್ಕಾರದ ಮುಂದಿದೆ. ಹಾಗಾಗಿಯೇ ವಿಧಾನಸೌಧದ ಒಂದು ಕಡೆ ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಳಸಲಾಗುತ್ತಿದೆ. ಕೊರೊನಾ ಸೋಂಕು ವಿಧಾನಸೌಧದಲ್ಲಿ ಅಷ್ಟೇ ಅಲ್ಲ, ವಿಕಾಸಸೌಧ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿ ಆವರಿಸಿದೆ. ಹೀಗಾಗಿ, ಈ ಯಂತ್ರ ಉಪಯುಕ್ತವೆನಿಸಿದೆ.

1.5 ಮೀಟರ್ ಅಂತರದಲ್ಲಿ ನಿಂತುಕೊಂಡರೆ ವ್ಯಕ್ತಿಯ ತಾಪಮಾನ ಗೊತ್ತಾಗುತ್ತದೆ. ಒಂದು ಬಾರಿ 20 ಜನರ ತಾಪಮಾನ ತಿಳಿಯುತ್ತದೆ. ಇದರಿಂದ ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ. ಪ್ರಾಯೋಗಿಕವಾಗಿ ಇಲ್ಲಿ ಅಳವಡಿಸಿದ್ದೇವೆ. ಈ ಯಂತ್ರಕ್ಕೆ ಉತ್ತಮ ಪ್ರತಿಕ್ರಯೆಯೂ ಸಿಕ್ಕಿದೆ. ಇದೇ ಮಾದರಿಯನ್ನ ತಿರುಪತಿಯಲ್ಲೂ ಅಳವಡಿಸಲಾಗಿದೆ. ಇದರ ಬೆಲೆ ₹60 ಸಾವಿರದಿಂದ ₹1 ಲಕ್ಷದವರೆಗೂ ಇದೆ ಎಂದು ಸೇಫ್ ಪ್ರೋ ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಕಾರ್ತಿಕ್ ಹೇಳಿದರು.

ABOUT THE AUTHOR

...view details