ದೇವನಹಳ್ಳಿ(ಬೆಂಗಳೂರು):ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ಪ್ರಯಾಣಿಕರ ಲಾಂಝ್ ಅನ್ನು ನಿರ್ಮಿಸಿದೆ. ಇದರಿಂದ ದೇಶಿಯ ಮತ್ತು ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14 ವರ್ಷ ಕಳೆದಿವೆ. ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆ ಪಡೆದಿದೆ. ಇದರ ನಡುವೆ ಇದೀಗ ವಿಶ್ವದಲ್ಲೇ ಹೊಸ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ ಮಾಡುವ ಮೂಲಕ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಲಿದೆ.