ಬೆಂಗಳೂರು:ಜೀವಬೆದರಿಕೆ ಇದೆ ಎನ್ನುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ರಾಜಕೀಯ ಕಾರಣದಿಂದ ನೋಡದೆ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಜೀವಬೆದರಿಕೆಯನ್ನು ರಾಜಕೀಯವಾಗಿ ನೋಡದೆ ಹೆಚ್ಡಿಕೆಗೆ ಭದ್ರತೆ ಹೆಚ್ಚಿಸುತ್ತೇವೆ: ಗೃಹ ಸಚಿವ - Karnataka political development
ಜೀವ ಬೆದರಿಕೆ ಇದೆ ಎಂಬ ಕಾರಣಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚಿನ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ
ಕುಮಾರಸ್ವಾಮಿ ಅವರು ಜೀವಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂಗೆ ಏನು ಭದ್ರತೆ ಕೊಡಬೇಕೋ ಅಷ್ಟು ಭದ್ರತೆ ಕೊಟ್ಟಿದ್ದೇವೆ. ಜೀವಬೆದರಿಕೆ ಬಗ್ಗೆ ವಿವರ ಕೊಟ್ಟರೆ ತನಿಖೆ ನಡೆಸಲಾಗುವುದು. ಅವರ ರಕ್ಷಣೆ ನಮ್ಮ ಆದ್ಯತೆ ಎಂದಿದ್ದಾರೆ.
ಬಿಜೆಪಿ ಕೊಲೆಗೆ ಸಂಚು ಮಾಡ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಗೃಹ ಸಚಿವನಾಗಿ ಏನು ಮಾಡಬೇಕು ಅದನ್ನು ನಾನು ಹೇಳುತ್ತಿದ್ದೇನೆ. ಹಾಗಾಗಿ ಕೊಲೆ ಸಂಚಿನ ಬಗ್ಗೆ ವಿವರ ನೀಡುವಂತೆ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.