ಕರ್ನಾಟಕ

karnataka

ETV Bharat / city

ವಿವರ ನೀಡದಿದ್ರೆ ನಿಗಮ ಮಂಡಳಿಗಳ ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ: ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ - ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

ನಿಗಮ-ಮಂಡಳಿಗಳಿಗೆ ಮಂಜೂರು ಮಾಡಿರುವ ಅನುದಾನದ ವಿವರಗಳನ್ನು ಒಂದು ವಾರದಲ್ಲಿ ಸಲ್ಲಿಸದಿದ್ದಲ್ಲಿ ನಿಗಮ-ಮಂಡಳಿಗಳು ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

hc
hc

By

Published : Oct 21, 2021, 7:22 PM IST

ಬೆಂಗಳೂರು: ಕರ್ನಾಟಕ ವೀರಶೈವ-ಲಿಂಗಾಯತ ಅಭಿವದ್ಧಿ ನಿಗಮ ಸೇರಿದಂತೆ ಹೊಸದಾಗಿ ರಚಿಸಿರುವ ವಿವಿಧ ಜಾತಿ ಆಧರಿತ ನಿಗಮ-ಮಂಡಳಿಗಳಿಗೆ ಮಂಜೂರು ಮಾಡಿರುವ ಅನುದಾನದ ವಿವರಗಳನ್ನು ಒಂದು ವಾರದಲ್ಲಿ ಸಲ್ಲಿಸದಿದ್ದಲ್ಲಿ ನಿಗಮ-ಮಂಡಳಿಗಳು ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಜಾತಿವಾರು ನಿಗಮ ಮಂಡಳಿಗಳ ಸ್ಥಾಪನೆ ಪ್ರಶ್ನಿಸಿ ವಕೀಲ ಎಸ್. ಬಸವರಾಜ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ವಾದಿಸಿ, ಹೊಸದಾಗಿ ರಚಿಸಿರುವ ನಿಗಮ-ಮಂಡಳಿಗಳಿಗೆ ಮಂಜೂರು ಮಾಡಲಾದ ಹಣಕಾಸಿನ ವಿವರಗಳನ್ನು ನೀಡಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನಿಗಮ-ಮಂಡಳಿಗಳಿಗೆ ಸರ್ಕಾರ ನೀಡಿದ ಅನುದಾನ ಎಷ್ಟು, ಅದರಲ್ಲಿ ಎಷ್ಟು ಖರ್ಚಾಗಿದೆ ಎಂದು ವಿವರವಾದ ಮಾಹಿತಿ ನೀಡಲು 2021ರ ಆಗಸ್ಟ್ 13ರಂದು ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಸರ್ಕಾರ ಕಾಲಾವಕಾಶ ಕೇಳುತ್ತಲೇ ಬಂದಿದೆ. ಆಗಸ್ಟ್ ಹೋಗಿ ಈಗ ಅಕ್ಟೋಬರ್ ಕೊನೆಗೊಳ್ಳುವ ಕಾಲ ಬಂದಿದೆ. ಇದು ಕೊನೆಯ ಅವಕಾಶ. ಒಂದು ವಾರದಲ್ಲಿ ವಿವರ ನೀಡದಿದ್ದರೆ ನಿಗಮ-ಮಂಡಳಿಗಳು ಹಣ ಖರ್ಚು ಮಾಡುವುದಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆ ಮುಂದೂಡಿತು.

ಕರ್ನಾಟಕ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಕ್ರೈಸ್ತರ ಅಭಿವದ್ಧಿ ಮಂಡಳಿ, ಕರ್ನಾಟಕ ಬ್ರಾಹ್ಮಣ ಅಭಿವದ್ಧಿ ಮಂಡಳಿ, ಕರ್ನಾಟಕ ಕಾಡುಗೊಲ್ಲ ಅಭಿವದ್ಧಿ ಪ್ರಾಧಿಕಾರ ರಚಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ABOUT THE AUTHOR

...view details