ಬೆಂಗಳೂರು: ಕೋವಿಡ್ ಎರಡನೇ ಅಲೆ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರು ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ಹಾಗೂ ಹೈಕೋರ್ಟ್ನ ಮೂರು ಪೀಠಗಳಲ್ಲಿ ಭಾಗಶಃ ಭೌತಿಕ ಕೋರ್ಟ್ ಕಲಾಪ ನಡೆಸಲು ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.
ಸೋಮವಾರದಿಂದ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ಆರಂಭ: ಹೈಕೋರ್ಟ್ ಮಾರ್ಗಸೂಚಿ ಬಿಡುಗಡೆ - High court
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆ 29 ಜಿಲ್ಲೆಗಳಲ್ಲಿ ಹಾಗೂ ಹೈಕೋರ್ಟ್ನ ಮೂರು ಪೀಠಗಳಲ್ಲಿ ಭಾಗಶಃ ಭೌತಿಕ ಕೋರ್ಟ್ ಕಲಾಪ ನಡೆಸಲು ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿ ಆದೇಶ ಹೊರಡಿಸಿದೆ.
High court
ಪರಿಷ್ಕೃತ ಮಾರ್ಗಸೂಚಿ ನಿಯಮಗಳು ಸೋಮವಾರದಿಂದ ಜಾರಿಗೆ ಬರುವಂತೆ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಹೈಕೋರ್ಟ್ನ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲಿ ದೈಹಿಕ ಹಾಗೂ ಆನ್ಲೈನ್ ಎರಡೂ ವಿಧದಲ್ಲೂ ಕಲಾಪ ನಡೆಯಲಿದೆ. ವಕೀಲರು ಆದಷ್ಟು ವಿಡಿಯೋ ಕಾನ್ಫರೆನ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಕೋರ್ಟ್ ಗಳಿಗೆ ಪ್ರಮುಖ ಮಾರ್ಗಸೂಚಿಗಳು:
- ದಿನಕ್ಕೆ 30 ಪ್ರಕರಣಗಳನ್ನು ಲಿಸ್ಟ್ ಮಾಡಿಕೊಳ್ಳಬೇಕು. ಬೆಳಗ್ಗೆ 15 ಹಾಗೂ ಮಧ್ಯಾಹ್ನದ ಕಲಾಪಕ್ಕೆ 15 ಪ್ರಕರಣಗಳನ್ನು ಪ್ರತ್ಯೇಕವಾಗಿ ಲಿಸ್ಟ್ ಮಾಡಬೇಕು. ಜಾಮೀನು ಅರ್ಜಿಗಳಿಗೆ ಈ ಮಿತಿ ಇಲ್ಲ.
- ನ್ಯಾಯಾಲಯಗಳು ಸಾಧ್ಯವಾದಷ್ಟು ವಕೀಲರ ಗೈರು ಹಾಜರಿಯಲ್ಲಿ ಪ್ರಕರಣಗಳನ್ನು ನಿರ್ಧರಿಸಬಾರದು. ಕಕ್ಷೀದಾರನಿಗೆ ವಕೀಲರನ್ನು ಕರೆ ತರಲು ಸೂಚನೆ ನೀಡಿದ ನಂತರವೂ ಸೂಕ್ತ ಕಾರಣವಿಲ್ಲದೇ, ಮುಂದೂಡಲು ಕೋರದೆ ಗೈರು ಹಾಜರಾದಲ್ಲಿ ಪ್ರಕರಣವನ್ನು ಕೋರ್ಟ್ ತನ್ನ ವಿವೇಚನೆ ಅನುಸಾರ ಮುಂದುವರೆಸಬಹುದು.
- ಕೋರ್ಟ್ ದಿನಕ್ಕೆ 5 ಸಾಕ್ಷ್ಯಗಳನ್ನು ಬೆಳಗಿನ ಕಲಾಪದ ವೇಳೆ ನೇರವಾಗಿ ದಾಖಲಿಸಬಹುದು. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನಿರ್ದೇಶನಗಳಿರುವ ಪ್ರಕರಣಗಳಿಗೆ ಇದು ಅನ್ವಯಿಸದು. ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸುವುದಕ್ಕೆ ಮಿತಿ ನಿರ್ಬಂಧವಿಲ್ಲ.
- ವಕೀಲರನ್ನು ಹೊರತುಪಡಿಸಿ, ಪಾರ್ಟಿ ಇನ್ಪರ್ಸನ್ಗಳು ಕಲಾಪಕ್ಕೆ ನೇರವಾಗಿ ಹಾಜರಾಗುವಂತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗಬೇಕು. ಅರ್ಜಿ ಕಚೇರಿ ಆಕ್ಷೇಪಣೆ ಸರಿಪಡಿಸುವ ಅಗತ್ಯ ಇದ್ದಲ್ಲಿ ಮಾತ್ರ ಪ್ರವೇಶಿಸಬಹುದು.
- ಕೋರ್ಟ್ ಸೂಚನೆ ಇಲ್ಲದೇ ನ್ಯಾಯಾಲಯಕ್ಕೆ ಯಾವುದೇ ಕಕ್ಷೀದಾರ ಅಥವಾ ಸಾಕ್ಷಿದಾರ ಹಾಜರಾಗುವಂತಿಲ್ಲ.
- ಕೋರ್ಟ್ ಆವಣರಗಳಲ್ಲಿರುವ ವಕೀಲರ ಸಂಘಗಳ ಕಚೇರಿಗಳನ್ನು ಮುಂದಿನ ಆದೇಶದವರೆಗೆ ತೆರೆಯುವಂತಿಲ್ಲ.