ಕರ್ನಾಟಕ

karnataka

ETV Bharat / city

ಡ್ರೀಮ್ 11 ಸಂಸ್ಥಾಪಕರ ವಿರುದ್ಧ ಕ್ರಮ ಜರುಗಿಸದಂತೆ ಹೈಕೋರ್ಟ್ ಸೂಚನೆ - ಡ್ರೀಮ್ 11 ಸಂಸ್ಥಾಪಕರ ವಿರುದ್ಧ ದೂರು

ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಡ್ರೀಮ್ 11 ಸಂಸ್ಥಾಪಕರಾದ ಭವಿತ್ ಶೇಠ್ ಹಾಗೂ ಹರ್ಷ ಜೈನ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

dream11
dream11

By

Published : Oct 28, 2021, 8:18 PM IST

ಬೆಂಗಳೂರು: ಆನ್ ಲೈನ್ ಜೂಜು ನಿಷೇಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ನಿಯಮಗಳ ಪ್ರಕಾರ ಡ್ರೀಮ್ 11 ಗೇಮ್ ಆ್ಯಪ್ ನಡೆಸುತ್ತಿರುವ ಸ್ಪೋರ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಭವಿತ್ ಶೇಠ್ ಹಾಗೂ ಹರ್ಷ ಜೈನ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಡ್ರೀಮ್ 11 ಸಂಸ್ಥಾಪಕರಾದ ಭವಿತ್ ಶೇಠ್ ಹಾಗೂ ಹರ್ಷ ಜೈನ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಪೊಲೀಸರು ಮುಂದಿನ ವಿಚಾರಣೆವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿ ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿದೆ.

ಪ್ರಕರಣವೇನು?:
ಇತ್ತೀಚೆಗೆ ಆನ್ ಲೈನ್ ಗೇಮ್ ನಿಷೇಧಿಸಿರುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆಯ ಸೆಕ್ಷನ್ 79 ಹಾಗೂ 80ರ ಅಡಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಡ್ರೀಮ್ 11 ಆ್ಯಪ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಾಗರಭಾವಿ ನಿವಾಸಿ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 7ರಂದು ಆ್ಯಪ್ ಸಂಸ್ಥಾಪಕ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಈ ಎಫ್ಐಆರ್ ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಸ್ಪೋರ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರು, ದೂರುದಾರರು ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದೆ ಅಸ್ಪಷ್ಟ ಆರೋಪ ಮಾಡಿದ್ದಾರೆ.

'ಡ್ರೀಮ್ 11' ಗೇಮ್ ಆಫ್ ಸ್ಕಿಲ್ ಆಗಿದೆಯೇ ಹೊರತು ಜೂಜು ಅಲ್ಲ. ಹಾಗಿದ್ದೂ ದೂರುದಾರರು ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತಂದಿರುವ ತಿದ್ದುಪಡಿ ತಂದು ಗೇಮ್ ಆಫ್ ಚಾನ್ಸ್ ರೀತಿಯ ಜೂಜು ಎಂದು ಭಾವಿಸಿ ದೂರು ದಾಖಲಿಸಿದ್ದಾರೆ. ಡ್ರೀಮ್ 11 ಆನ್ ಲೈನ್ ಗೇಮ್ ಮೂಲಕ ಜನ ಹಣ ಕಳೆದುಕೊಳ್ಳಲಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾಗಿದ್ದು, ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

(ಆನ್​ಲೈನ್​​​ ಜೂಜು ನಿಷೇಧ: ರಾಜ್ಯದಲ್ಲಿ ಡ್ರೀಮ್ 11 ಸೇವೆ ಸ್ಥಗಿತ)

ABOUT THE AUTHOR

...view details