ಕರ್ನಾಟಕ

karnataka

ETV Bharat / city

ಮರ್ಡರ್ಡ್ ಮದರ್ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನೆಟ್ ಫ್ಲಿಕ್ಸ್​​ಗೆ ಹೈಕೋರ್ಟ್ ಆದೇಶ - ಮರ್ಡರ್ಡ್ ಮದರ್ ಪ್ರಸಾರಕ್ಕೆ ಹೈಕೋರ್ಟ್ ತಡೆ

ಮರ್ಡರ್ಡ್ ಮದರ್ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಹೈಕೋರ್ಟ್ ನೆಟ್ ಫ್ಲಿಕ್ಸ್​ಗೆ ಮಧ್ಯಂತರ ಆದೇಶ ನೀಡಿದೆ.

NEtflix
NEtflix

By

Published : Oct 5, 2021, 12:30 AM IST

ಬೆಂಗಳೂರು: ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟಿವ್ ಸರಣಿಯ ಮೊದಲ ಕಂತು ಮರ್ಡರ್ಡ್ ಮದರ್ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಹೈಕೋರ್ಟ್ ನೆಟ್ ಫ್ಲಿಕ್ಸ್​ಗೆ ಮಧ್ಯಂತರ ಆದೇಶ ನೀಡಿದೆ.


ನೆಟ್ ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿರುವ ಮರ್ಡರ್ಡ್ ಮದರ್ ಸಾಕ್ಷ್ಯಚಿತ್ರದ ಕಥೆ ಹೊಂದಿರುವ ದೃಶ್ಯಗಳು ಪ್ರಕರಣದಲ್ಲಿನ ಆರೋಪಿಯ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸಿ ಶ್ರೀಧರ್ ರಾವ್ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶಾಮ್ ಪ್ರಸಾದ್ ಅವರಿದ್ದ ಪೀಠ, ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಧ್ಯಂತರ ಆದೇಶ ನೀಡಿದೆ. ಹಾಗೆಯೇ, ಚಿತ್ರವು ಆನ್ ಲೈನ್​​ನಲ್ಲಿ ಎಲ್ಲಿಯೂ ಸಿಗುವಂತೆ ಇರಬಾರದು ಎಂದು ಸೂಚಿಸಿದೆ.


ಅರ್ಜಿದಾರರಾದ ಶ್ರೀಧರ್ ರಾವ್, ಕ್ರೈಮ್ ಸಾಕ್ಷ್ಯಚಿತ್ರದ ಸರಣಿಯ ಮೊದಲ ಕಂತಿನಲ್ಲಿ ಬೆಂಗಳೂರಿನಲ್ಲಿ ತಾಯಿಯೇ ಮಗಳ ಕೊಂದ ಕಥೆ ಇದೆ. ಮಗಳ ಗೆಳೆಯ ಈ ಕೊಲೆಯಲ್ಲಿ ಶಾಮೀಲಾಗಿರುವಂತೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ತನಿಖೆಯ ಕೆಲ ಅಂಶಗಳನ್ನೂ ಸೇರಿಸಲಾಗಿದೆ. ತಪ್ಪೊಪ್ಪಿಗೆಯ ವಿಡಿಯೋ ತುಣುಕು ಕೂಡ ಸರಣಿಯಲ್ಲಿ ಇದ್ದು, ಇದು ಆರೋಪಿಯ ನ್ಯಾಯಸಮ್ಮತ ವಿಚಾರಣೆಗೆ ಅಡ್ಡಿಯಾಗುತ್ತದೆ. ಅದೇ ರೀತಿ ಅರ್ಜಿದಾರರ ಸಾರ್ವಜನಿಕ ಬದುಕಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಸಾಕ್ಷ್ಯಚಿತ್ರದ ಮೊದಲ ಸರಣಿ ಮರ್ಡರ್ಡ್ ಮದರ್ ಕಂತು ಪ್ರಸಾರ ಮಾಡದಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ABOUT THE AUTHOR

...view details