ಕರ್ನಾಟಕ

karnataka

ETV Bharat / city

ಬಿಇಎಲ್​ನ ಪ್ಯಾರಾ ಅಥ್ಲೆಟಿಕ್ ಉದ್ಯೋಗಿಗೆ ಬಡ್ತಿ, ಆರ್ಥಿಕ ಸೌಲಭ್ಯ ಕಲ್ಪಿಸಲು ಹೈಕೋರ್ಟ್ ಆದೇಶ - paraphyletic sportsmen

ಪ್ಯಾರಾ ಅಥ್ಲೆಟಿಕ್ ಉದ್ಯೋಗಿಗೆ ಬಡ್ತಿ ಸೇರಿದಂತೆ ಇತರೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್)ಗೆ ಹೈಕೋರ್ಟ್​ ಆದೇಶಿಸಿದೆ.

ಹೈಕೋರ್ಟ್ ಆದೇಶ
ಹೈಕೋರ್ಟ್ ಆದೇಶ

By

Published : May 12, 2022, 11:03 AM IST

ಬೆಂಗಳೂರು: ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ಯಾರಾ ಅಥ್ಲೆಟಿಕ್ ಉದ್ಯೋಗಿಗೆ ಬಡ್ತಿ ಸೇರಿದಂತೆ ಇತರೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲು ಹೈಕೋರ್ಟ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್)ಗೆ ಆದೇಶಿಸಿದೆ. ಸೌಲಭ್ಯ ಕಲ್ಪಿಸಲು ಕೈಗಾರಿಕಾ ನ್ಯಾಯಾಧೀಕರಣ ನೀಡಿದ್ದ ಆದೇಶ ಪ್ರಶ್ನಿಸಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಶೇಷಚೇತನರ ಕೋಟಾದಡಿಯಲ್ಲಿ ಬಿಇಎಲ್ ಡ್ರಾಫ್ಟ್ಸ್‌ಮನ್ ಡಬ್ಲ್ಯೂಜಿ-3 ಶ್ರೇಣಿಯ ಉದ್ಯೋಗಕ್ಕೆ 1998ರ ಜ.1ರಂದು ವೆಂಕಟರಮಣಪ್ಪ ಸೇರಿದ್ದರು. ಬ್ರಿಸ್ಬೇನ್, ಬ್ಯಾಂಕಾಕ್, ಫ್ರಾನ್ಸ್, ಬುಸಾನ್, ಗ್ರೀಸ್ ಮತ್ತು ಕೌಲಾಲಂಪುರ್ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರು ಮತ್ತಷ್ಟು ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕಿತ್ತು.

ಆದರೆ, ವೆಂಕಟರಮಣಪ್ಪ ಸೀಮಿತ ಆದಾಯದ ಮೂಲ ಹೊಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜುನ ಅಥವಾ ಖೇಲ್ ರತ್ನ ಪ್ರಶಸ್ತಿ ಪಡೆದ ಉದ್ಯೋಗಿಗಳಿಗೆ ಸೇವಾ ಅರ್ಹತೆ ಲೆಕ್ಕಿಸದೆ ಬಡ್ತಿ ನೀಡಬೇಕು. ಹೆಚ್ಚುವರಿ ಹಣಕಾಸು ಸೌಲಭ್ಯ ಹಾಗೂ ಭತ್ಯೆ ನೀಡುವ ಸಂಬಂಧ ಹೆಚ್‌ಎಎಲ್ ಸೇರಿದಂತೆ ಇತರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀತಿ ರೂಪಿಸಿವೆ. ಇದೇ ಮಾದರಿಯ ನೀತಿ ರೂಪಿಸಲು ಬಿಇಎಲ್​​ಗೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿ ವೆಂಕಟರಮಣ್ಣಪ್ಪ ಕೇಂದ್ರ ಕೈಗಾರಿಕಾ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು.

ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬಿಇಎಲ್ ನೀತಿ ರೂಪಿಸಬೇಕು ಮತ್ತು ವೆಂಕಟರಮಣ್ಣಪ್ಪಗೆ ಬಡ್ತಿ ನೀಡಬೇಕು ಎಂದು 2009ರಲ್ಲಿ ನ್ಯಾಯಾಧೀಕರಣ ಆದೇಶಿಸಿತ್ತು. ಅದರಂತೆ ಬಿಇಎಲ್ 2011ರಲ್ಲಿ ನೀತಿ ರೂಪಿಸಿತ್ತಾದರೂ ವೆಂಕಟರವಣ್ಣಪ್ಪಗೆ ಹಣಕಾಸು ಸೇರಿದಂತೆ ಇನ್ನಿತರ ಸೌಲಭ್ಯ ನೀಡಿರಲಿಲ್ಲ. ಈ ಕುರಿತು ಬಿಇಎಲ್ ನೌಕರರ ಸಂಘದ ಮೂಲಕದ ವೆಂಕಟರವಣಪ್ಪ ಕೇಂದ್ರ ಕೈಗಾರಿಕಾ ನ್ಯಾಯಾಧೀಕರಣಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದರು. ವೆಂಕಟರಮಣಪ್ಪಗೆ ಬಡ್ತಿ, ಹಣಕಾಸು ಸೌಲಭ್ಯ ಕಲ್ಪಿಸುವಂತೆ ನ್ಯಾಯಾಧೀಕರಣ 2020ರ ಫೆ.27ರಂದು ಆದೇಶಿಸಿತ್ತು, ಅದನ್ನು ರದ್ದುಪಡಿಸಲು ಕೋರಿ ಬಿಇಎಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರಿಗೆ ಅಗತ್ಯ ಬಡ್ತಿ, ಹಣಕಾಸು ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಬಿಇಎಲ್‌ಗೆ ನಿರ್ದೇಶಿಸಿದೆ.

ಇದನ್ನೂ ಓದಿ: ಪ.ಬಂಗಾಳ ಸೇರಿ ಈಶಾನ್ಯದ 7 ರಾಜ್ಯಗಳಿಗೆ 35,000 ಸ್ವಚ್ಛಸೇವಕರ ನೇಮಕಕ್ಕೆ ಮುಂದಾದ ಆರ್‌ಎಸ್‌ಎಸ್‌

ABOUT THE AUTHOR

...view details