ಕರ್ನಾಟಕ

karnataka

ETV Bharat / city

ಇಂಜಿನಿಯರಿಂಗ್‌ ಬದಲು ದಂತ ವೈದ್ಯಕೀಯ ಕೋರ್ಸ್‌ಗೆ ಸೇರಿದ್ದ ವಿದ್ಯಾರ್ಥಿನಿ ಪರ ಹೈಕೋರ್ಟ್‌ ಆದೇಶ

ಇಂಜಿನಿಯರಿಂಗ್ ಬದಲು ಡೆಂಟಲ್‌ ಕೋರ್ಸ್‌ ಸೇರಿದ್ದ ಕಾರಣಕ್ಕೆ ವಿದ್ಯಾರ್ಥಿನಿ ಪರೀಕ್ಷೆಗೆ ಅವಕಾಶ ನೀಡದ ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಭಾರಿ ಹಿನ್ನಡೆಯಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯ ಆದೇಶವನ್ನು ರದ್ದು ಮಾಡಿರುವ ರಾಜ್ಯ ಹೈಕೋರ್ಟ್, ವಿದ್ಯಾರ್ಥಿನಿಯು ಡೆಂಟಲ್ ಪರೀಕ್ಷೆ ಬರೆಯಲು ಅರ್ಹರಿದ್ದಾರೆ ಎಂದು ಹೇಳಿದೆ.

High Court order on behalf of student enrolled in dental course instead of engineering
ಇಂಜಿನಿಯರಿಂಗ್‌ ಬದಲು ದಂತ ವೈದ್ಯಕೀಯ ಕೋರ್ಸ್‌ಗೆ ಸೇರಿದ್ದ ವಿದ್ಯಾರ್ಥಿನಿ ಪರ ಹೈಕೋರ್ಟ್‌ ಆದೇಶ

By

Published : Nov 16, 2021, 2:42 AM IST

ಮಂಗಳೂರು: ಇಂಜಿನಿಯರಿಂಗ್‌ಗೆ ಬದಲು ಡೆಂಟಲ್ ಕೋರ್ಸ್ ಸೇರಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿವಿಯ ಆದೇಶವನ್ನು ರದ್ದುಪಡಿಸಿರುವ ರಾಜ್ಯ ಹೈಕೋರ್ಟ್, ವಿದ್ಯಾರ್ಥಿನಿಯು ಡೆಂಟಲ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ಮಾತ್ರವಲ್ಲದೆ ಅದೇ ಕೋರ್ಸ್ ಮುಂದುವರಿಸಲು ಅವಕಾಶ ಕಲ್ಪಿಸಿ ಮಹತ್ವದ ತೀರ್ಪು ನೀಡಿದೆ.

ನಗರದ ಶ್ರೀನಿವಾಸ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ನಿಧಿ ಶೆಟ್ಟಿಗಾರ್ ದ್ವಿತೀಯ ಪಿಯುಸಿ ಬಳಿಕ ಸಿಇಟಿ ಪರೀಕ್ಷೆ ಬರೆದು ಇಂಜಿನಿಯರ್ ಕೋರ್ಸ್‌ಗೆ ಹೆಸರು ನೋಂದಾಯಿಸಿದ್ದರು. ಸಿಇಟಿಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಗೆ ಅರ್ಹತೆ ಗಳಿಸಿದ್ದರು. ಬಳಿಕ ಮನಸ್ಸು ಬದಲಿಸಿ ದಂತ ವೈದ್ಯಕೀಯ ಕೋರ್ಸ್ ಮಾಡಲು ತೀರ್ಮಾನಿಸಿ ನೀಟ್ ಪರೀಕ್ಷೆ ಬರೆದಿದ್ದಾರೆ. ಅಲ್ಲದೆ ನೀಟ್ ಕೌನ್ಸಿಲಿಂಗ್‌ನಲ್ಲಿ ಅರ್ಹತೆ ಪಡೆದು ಮಂಗಳೂರಿನ ಶ್ರೀನಿವಾಸ ದಂತ ವೈದ್ಯಕೀಯ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ತರಗತಿಗೆ ಹಾಜರಾಗುತ್ತಾರೆ.

ಈ ಮಧ್ಯೆ ಮೊದಲು ಇಂಜಿನಿಯರಿಂಗ್ ಪರೀಕ್ಷೆ ಬರೆದು ಹೆಸರು ನೋಂದಾಯಿಸಿರುವುದರಿಂದ ಅದರಲ್ಲೇ ಮುಂದುವರಿಯಬೇಕು, ದಂತ ವೈದ್ಯಕೀಯ ಪರೀಕ್ಷೆಗೆ ಹಾಲ್ ಟಿಕೆಟ್ ನೀಡಲು ಸಾಧ್ಯವಿಲ್ಲವೆಂದು ರಾಜೀವ್ ಗಾಂಧಿ ವಿವಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತು ನ್ಯಾಯಮೂರ್ತಿ ಅನಂತ್ ಹೆಗಡೆ ಅವರಿದ್ದ ಪೀಠ, ರಾಜೀವ್ ಗಾಂಧಿ ವಿವಿ ಹಾಗೂ ಅರ್ಜಿದಾರರ ವಾದ, ಪ್ರತಿವಾದವನ್ನು ಆಲಿಸಿ ನಿನ್ನೆ ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ.

ಮಧ್ಯಂತರ ತೀರ್ಪು ನೀಡಿರುವ ನ್ಯಾಯಾಲಯ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ರಾಜೀವ್ ಗಾಂಧಿ ವಿವಿಯ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಇಂಜಿನಿಯರಿಂಗ್‌ಗೆ ಹೆಸರು ನೋಂದಾಯಿಸಿದ್ದರೂ ದಂತ ವೈದ್ಯಕೀಯ ಕೋರ್ಸ್‌ನಲ್ಲಿ ಮುಂದುವರಿಯಲು ತಡೆ ನೀಡುವಂತಿಲ್ಲ ಎಂದು ಹೇಳಿದೆ.

ವಿದ್ಯಾರ್ಥಿನಿಗೆ ದಂತ ವೈದ್ಯಕೀಯ ಶಿಕ್ಷಣ ಮುಂದುವರಿಸುವ ಎಲ್ಲಾ ಅರ್ಹತೆ ಇದೆ ಎಂದು ಹೇಳಿದ ನ್ಯಾಯಾಲಯ ನ.16ರಿಂದ ಆರಂಭಗೊಳ್ಳುವ ದಂತ ವೈದ್ಯಕೀಯ ಪರೀಕ್ಷೆಯನ್ನು ಅರ್ಜಿದಾರರು ಬರೆಯಬಹುದು. ವಿದ್ಯಾವಿದ್ಯಾಲಯ ಕೂಡ ಹಿಂದಿನ ಫಲಿತಾಂಶ ಪ್ರಕಟಿಸಬಹುದು ಎಂದು ತೀರ್ಪು ನೀಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ರವೀಂದ್ರ ಕಾಮತ್ ವಾದ ಮಂಡಿಸಿದ್ದರು.

ABOUT THE AUTHOR

...view details