ಕರ್ನಾಟಕ

karnataka

ETV Bharat / city

ಗಂಗೂಬಾಯಿ ಸಂಗೀತ ವಿವಿ ಕುಲಪತಿ ನೇಮಕ ವಿವಾದ : ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್​ ನಿರ್ದೇಶನ

ಸರ್ಕಾರ ಗಂಗೂಬಾಯಿ ಸಂಗೀತ ವಿವಿ ಕುಲಪತಿ ನೇಮಕ ಆದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದದ್ದರೆ ನ್ಯಾಯಾಲಯವೇ ತನಿಖೆಗೆ ಆದೇಶಿಸಲಿದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

high-court-on-gangubhai-hangal-music-and-performing-arts-university
ಗಂಗೂಬಾಯಿ ಸಂಗೀತ ವಿವಿ ಕುಲಪತಿ ನೇಮಕ ವಿವಾದ : ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್​ ನಿರ್ದೇಶನ

By

Published : Aug 17, 2021, 3:09 AM IST

ಬೆಂಗಳೂರು : ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ವಿವಿಗೆ ಕುಲಪತಿಯಾಗಿ ಡಾ. ನಾಗೇಶ್ ಬೆಟ್ಟಕೋಟೆ ಅವರನ್ನು ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಯಾವುದೇ ನಿರ್ಣಯ ಕೈಗೊಳ್ಳದಿದ್ದರೆ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ವೇಳೆ ದಾಖಲೆಗಳಲ್ಲಿನ ವ್ಯತ್ಯಾಸ ಗಮನಿಸಿದ ಪೀಠ, ಒಂದೇ ಫೈಲ್ ನಂಬರ್​ನಲ್ಲಿ ಎರಡೆರಡು ಬಗೆಯ ದಾಖಲೆಗಳಿವೆ. ಕುಲಾಧಿಪತಿಗಳ ಕಚೇರಿ ಕಡತದಲ್ಲಿ ಆಗಿನ ಸಿಎಂ, ಡಿಸಿಎಂ ಟಿಪ್ಪಣಿ ಇದೆ. ಆದರೆ ರಾಜ್ಯಪಾಲರ ಸಹಿ ಇಲ್ಲ. ಆದರೆ ಈ ದಾಖಲೆ ಸರ್ಕಾರದ ಕಡತದಲ್ಲಿ ಇಲ್ಲ. ದಾಖಲೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ವಿವಿ ಕುಲಪತಿ ನೇಮಕ ಸಂಬಂಧ ಎರಡು ಕಡತಗಳನ್ನು ನಿರ್ವಹಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದೆ.

ಅಲ್ಲದೆ, ಸರ್ಕಾರ ಕುಲಪತಿ ನೇಮಕ ಆದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದದ್ದರೆ ನ್ಯಾಯಾಲಯವೇ ತನಿಖೆಗೆ ಆದೇಶಿಸಲಿದೆ ಎಂದಿತು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ರಚಿಸಲಾಗಿದ್ದ ಶೋಧನಾ ಸಮಿತಿಯ ಶಿಫಾರಸು ಪಟ್ಟಿಯಲ್ಲಿ ನಾಗೇಶ್ ಹೆಸರು ಇಲ್ಲದಿದ್ದರೂ ಅವರನ್ನು ರಾಜ್ಯಪಾಲರು ನೇಮಿಸಿರುವುದು ಕಾನೂನು ಬಾಹಿರ ಕ್ರಮ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಜಾರಿ ವಿಚಾರ; ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ವಿವರಣೆ ಕೇಳಿದ ಹೈಕೋರ್ಟ್

ABOUT THE AUTHOR

...view details