ಕರ್ನಾಟಕ

karnataka

ETV Bharat / city

ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್​ ಭೇಟಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕಂಡಿದ್ದೇನು? - Judges visiting Parappana Agrahara

justice Veerappa visits Parappana Agrahara jail: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ತಂಡ ಕಾರಾಗೃಹಕ್ಕೆ ದಿಢೀರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

paappana-agrahara-jail
ಪರಪ್ಪನ ಅಗ್ರಹಾರ

By

Published : Jan 29, 2022, 8:18 PM IST

Updated : Jan 29, 2022, 9:10 PM IST

ಆನೇಕಲ್(ಬೆಂಗಳೂರು ಗ್ರಾಮಾಂತರ):ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ತಂಡ ಕಾರಾಗೃಹಕ್ಕೆ ದಿಢೀರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನ್ಯಾಯಮೂರ್ತಿಗಳಾದ ವೀರಪ್ಪ ಮತ್ತು ದಿನೇಶ್ ಅವರು ಪೊಲೀಸರು ಮತ್ತು ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೇ ದಿಢೀರ್​ ಭೇಟಿ ನೀಡ ಕಾರಾಗೃಹದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ನ್ಯಾಯಮೂರ್ತಿಗಳ ದಿಢೀರ್​ ಭೇಟಿ, ಪರಿಶೀಲನೆ

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನ್ಯಾ.ವೀರಪ್ಪ​, ಮಹಿಳಾ ಮತ್ತು ಪುರುಷ ಕೈದಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವರದಿ ಪಡೆಯಲಾಗಿದೆ. ಊಟೋಪಚಾರ ಶುಚಿತ್ವ, ಶೌಚಾಲಯ ಬ್ಯಾರಕ್​ಗಳ ನಿರ್ವಹಣೆ, ಆಹಾರ ನೀಡಿಕೆ, ಔಷಧೋಪಚಾರ, ಆಸ್ಪತ್ರೆ, ಸ್ನಾನದ ಮನೆಗಳನ್ನೆಲ್ಲಾ ತಪಾಸಣೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದು ಕಂಡುಬಂದಿಲ್ಲ ಎಂದು ತಿಳಿಸಿದರು.

ತಪಾಸಣೆ ವೇಳೆ ಜೈಲಿನಲ್ಲಿ ಎಲ್ಲವನ್ನು ಸರಿಯಾದ ಕ್ರಮದಲ್ಲಿಡಲಾಗಿದೆ. ಅದು ನಿಜವಾಗಿರದೇ ಇರಬಹುದು. ಮುಂದೆ ಪದೇ ಪದೇ ಇಂತಹ ಭೇಟಿ ನೀಡಿ ಕಾರಾಗೃಹದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 9:10 PM IST

ABOUT THE AUTHOR

...view details