ಕರ್ನಾಟಕ

karnataka

ETV Bharat / city

ರಸ್ತೆ ಗುಂಡಿಗೆ ಬಿದ್ದು ಜನ ಸಾವನ್ನಪ್ಪಿದ್ದಾಗ ನಮಗೂ ಪಾಪಪ್ರಜ್ಞೆ ಕಾಡುತ್ತದೆ: ಅಶ್ವಿನ್ ಸಾವಿಗೆ ಹೈಕೋರ್ಟ್ ಸಂತಾಪ

ರಸ್ತೆ ಗುಂಡಿಗೆ ಬಿದ್ದು ಜನ ಸಾವನ್ನಪ್ಪಿದ್ದಾಗ ನಮಗೂ ಪಾಪಪ್ರಜ್ಞೆ ಕಾಡುತ್ತದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

By

Published : Mar 16, 2022, 7:36 AM IST

people die cause falling into a pothole  high court guilty  Pothole issue  High court warn to BBMP  ರಸ್ತೆ ಗುಂಡಿಗೆ ಬಿದ್ದು ಜನ ಸಾವು  ರಸ್ತೆ ಗುಂಡಿಗಳಿಂದ ಸಂಭವಿಸುವ ಸಾವಿನ ಬಗ್ಗೆ ಹೈಕೋರ್ಟ್​ ಬೇಸರ  High Court is saddened by the death caused by pothole  ರಸ್ತೆ ಗುಂಡಿಗಳ ವಿವಾದ  ಬಿಬಿಎಂಪಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್​
ಸಂತಾಪ

ಬೆಂಗಳೂರು:ರಸ್ತೆ ಗುಂಡಿಗಳಿಗೆ ಬಿದ್ದು ಜನ ಸಾವನ್ನಪ್ಪುವ ಕುರಿತು ಮಾಧ್ಯಮಗಳಲ್ಲಿ ವರದಿ ನೋಡಿದಾಗ ನಮಗೂ ಪಾಪಪ್ರಜ್ಞೆ ಕಾಡುತ್ತದೆ ಎಂದು ಹೈಕೋರ್ಟ್ ನಗರದ ಕೆಟ್ಟ ರಸ್ತೆಗಳ ಕುರಿತಂತೆ ಬೇಸರ ವ್ಯಕ್ತಪಡಿಸಿದೆ. ಇದೇ ವೇಳೆ, ಮುಂದಿನ ಹದಿನೈದು ದಿನಗಳಲ್ಲಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಮುಚ್ಚವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಈ ವಿಚಾರದಲ್ಲಿ ಬಿಬಿಎಂಪಿ ನೆಪ ಹೇಳುವುದನ್ನು ಬಿಡಬೇಕು ಎಂದು ಹೈಕೋರ್ಟ್ ಪಾಲಿಕೆಗೆ ತಾಕೀತು ಮಾಡಿದೆ.

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ಧ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಓದಿ:ರಿಯಾಯಿತಿ ದರದ ಕಚ್ಚಾ ತೈಲ ನೀಡುವ ರಷ್ಯಾ ಪ್ರಸ್ತಾಪಕ್ಕೆ ಭಾರತ ಒಪ್ಪಿಗೆ, ನಿರ್ಬಂಧಗಳ ಉಲ್ಲಂಘನೆಯಲ್ಲ - ವೈಟ್‌ಹೌಸ್‌

ವಿಚಾರಣೆ ವೇಳೆ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಕ್ರಿಯಾ ಯೋಜನೆ ಪರಿಶೀಲಿಸಿದ ಪೀಠ, ಪಾಲಿಕೆ ಸಲ್ಲಿಸಿರುವ ವರದಿ ತೃಪ್ತಿಕರವಾಗಿಲ್ಲ. ಸಮಸ್ಯೆ ಕುರಿತಂತೆ ಈಗಾಗಲೇ ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ನೀಡಿದ್ದ ಭರವಸೆಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆ ಇಲ್ಲ. ಮುಖ್ಯವಾಗಿ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಂದಿನ 15 ದಿನಗಳಲ್ಲಿ ಸಮರೋಪಾದಿಯಲ್ಲಿ ಸರಿಪಡಿಸಬೇಕು ಎಂದು ತಾಕೀತು ಮಾಡಿತು.

ನಗರದ ಸಿಬಿಡಿ (ಸೆಂಟ್ರಲ್ ಬ್ಯುಸಿನೆಟ್ ಡಿಸ್ಟ್ರಿಕ್ಟ್) ಏರಿಯಾದ ರಸ್ತೆಗಳನ್ನು ಮೂರು ದಿನಗಳಲ್ಲಿ ಸರ್ವೆ ಮಾಡಬೇಕು. ಈ ಕಾರ್ಯಕ್ಕೆ ಪಾಲಿಕೆ ಸಂಬಂಧಪಟ್ಟ ಸಂಸ್ಥೆಗಳ ನೆರವು ಪಡೆದುಕೊಳ್ಳಬಹುದು. ಬಳಿಕ ತಡ ಮಾಡದೇ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಸೂಕ್ತ ತಂತ್ರಜ್ಞಾನ ಬಳಸಿ ಮುಚ್ಚಬೇಕು. ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ನೀಡಿರುವ ಭರವಸೆಯಂತೆ 15 ದಿನಗಳಲ್ಲಿ ನಗರದ ರಸ್ತೆಗಳನ್ನು ಸರಿಪಡಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಪೀಠಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಓದಿ:ಮಾ. 22ರಂದು ವಾಜಪೇಯಿ ಮೈದಾನದಲ್ಲಿ ಯೋಗಿ ಆದಿತ್ಯನಾಥ್​ ಪ್ರಮಾಣವಚನ?

ಅಶ್ವಿನ್ ಸಾವಿಗೆ ಸಂತಾಪ :ವಿಚಾರಣೆ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಅಶ್ವಿನ್ ಎಂಬುವರು ರಸ್ತೆ ಗುಂಡಿ ಪರಿಣಾಮವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಕುರಿತಂತೆ ಮಾಧ್ಯಮಗಳ ವರದಿ ಪ್ರಸ್ತಾಪಿಸಿದ ಪೀಠ, ರಸ್ತೆ ಗುಂಡಿ ಕಾರಣಕ್ಕಾಗಿ ಜನ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ ಕುರಿತು ಪತ್ರಿಕೆಗಳಲ್ಲಿ ಓದಿದಾಗ ನಮಗೇ ಪಾಪಪ್ರಜ್ಞೆ ಕಾಡುತ್ತದೆ. ಯುವಕನೊಬ್ಬ ಅಕಾಲಿಕವಾಗಿ ಸಾವನ್ನಪ್ಪಿದ್ದು ನಿಜಕ್ಕೂ ದುಃಖಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿತು.

ABOUT THE AUTHOR

...view details